alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಡಹಗಲೇ ಗ್ರಾಮದಲ್ಲಿ ಅಡ್ಡಾಡಿದ ಸಿಂಹ

tiger-mosಮಾನವನ ದುರಾಸೆಗೆ ಕಾಡು ನಾಶವಾಗುತ್ತಿರುವುದರ ಪರಿಣಾಮ ಕಾಡು ಪ್ರಾಣಿಗಳು ಆಹಾರ ಅರಸಿ ನಾಡಿಗೆ ಬರಲಾರಂಭಿಸಿವೆ. ಹೀಗೆ ಗುಜರಾತ್ ನ ಗ್ರಾಮವೊಂದಕ್ಕೆ ಹಾಡಹಗಲೇ ನುಗ್ಗಿದ ಹೆಣ್ಣು ಸಿಂಹವೊಂದು ಗ್ರಾಮಸ್ಥರ ಕಣ್ಣ ಮುಂದೆಯೇ ಹಸುವೊಂದನ್ನು ಕೊಂದು ತಿಂದಿರುವ ಘಟನೆ ನಡೆದಿದೆ.

ಗುಜರಾತ್ ನ ಅಮ್ರೇಲಿ ಜಿಲ್ಲೆಯ ಧಾರಿ ಟೌನ್ ವ್ಯಾಪ್ತಿಯ ವೀರ್ಪುರ್ ಗ್ರಾಮಕ್ಕೆ ಹಾಡಹಗಲೇ ಸಿಂಹಿಣಿ ನುಗ್ಗಿದ್ದನ್ನು ಕಂಡ ಗ್ರಾಮಸ್ಥರು ಕಂಗಾಲಾಗಿ ಮಾಳಿಗೆ ಏರಿ ಕುಳಿತಿದ್ದಾರೆ. ಕೆಲವರು ದೂರದಿಂದಲೇ ಕೂಗಿ ಅದನ್ನು ಓಡಿಸುವ ಯತ್ನ ಮಾಡಿದ್ದಾರೆ. ಇದನ್ನು ನಿರ್ಲಕ್ಷಿಸಿದ ಸಿಂಹಿಣಿ, ಹಸುವೊಂದರ ಮೇಲೆ ದಾಳಿ ಮಾಡಿ ಕೊಂದು ಹಾಕಿದ್ದಲ್ಲದೇ ಅದನ್ನು ಭಕ್ಷಿಸಿದೆ.

ಬಳಿಕ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಒಗ್ಗೂಡಿ ಜೋರಾಗಿ ಗಲಾಟೆ ಮಾಡಿ ಅದನ್ನು ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಡಹಗಲೇ ಗ್ರಾಮಕ್ಕೆ ಸಿಂಹ ನುಗ್ಗಿರುವುದು ಗ್ರಾಮಸ್ಥರಲ್ಲಿ ಭಯಭೀತಿಯನ್ನುಂಟು ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...