alex Certify
ಕನ್ನಡ ದುನಿಯಾ       Mobile App
       

Kannada Duniya

ಮುಖವನ್ನೇ ಬದಲಿಸಿದ ಆ ಒಂದು ಶಸ್ತ್ರ ಚಿಕಿತ್ಸೆ…!

ವೈದ್ಯಕೀಯ ಕ್ಷೇತ್ರ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದಂತೆ, ಪ್ರತಿನಿತ್ಯ ನೂರಾರೂ ಹೊಸ ಪ್ರಯೋಗ ನಡೆಯುತ್ತಿರುತ್ತಲೇ ಇರುತ್ತವೆ. ಇದಕ್ಕೆ ತಾಜಾ ಉದಾಹರಣೆ ಎನ್ನುವಂತೆ ಚೆನ್ನೈ ಮೂಲದ ಸಿಂಹ ಮುಖ ಹೋಲುವ ವ್ಯಕ್ತಿಯ ಮುಖವನ್ನೇ ಪ್ಲಾಸ್ಟಿಕ್ ಸರ್ಜರಿ ಮೂಲಕ ಸರಿಪಡಿಸಿದ್ದಾರೆ.

ಚೆನ್ನೈ ಮೂಲದ ಸುರೇಶ್ ಎನ್ನುವವರಿಗೆ ಕಳೆದ ಎರಡು ದಶಕದಿಂದ ಸಿಂಹ ಮುಖದ ಸಿಂಡ್ರೋಂ ಬಂದಿತ್ತು. ಇದರಿಂದ ಅವರ ಮುಖ ಸಿಂಹದ ಮುಖವನ್ನು ಹೋಲುವ ರೀತಿಯಲ್ಲಿ ಬದಲಾಗುವುದರೊಂದಿಗೆ, ಮುಖದ ಆಕಾರವೇ ಕೆಟ್ಟಿತ್ತು. ಇದೀಗ ಡಾ. ಸುನೀಲ್ ರಿಚರ್ಡ್ ಸನ್ ಅವರ ನೇತೃತ್ವದಲ್ಲಿ ನಡೆದ ಪ್ಲಾಸ್ಟಿಕ್ ಸರ್ಜರಿ ಮೂಲಕ, ಸಿಂಹ ಮುಖ ಹೋಗಿ ಸಾಮಾನ್ಯ ಸ್ಥಿತಿಗೆ ಬಂದಿದೆ ಎಂದು ವರದಿಯಾಗಿದೆ.

ಸಿಂಹ ಮುಖದ ಸಿಂಡ್ರೋಮ್ ನಿಂದ ಕೇವಲ ಮುಖದ ಚಹರೆ ಬದಲಾಗುವುದು ಮಾತ್ರವಲ್ಲದೇ, ಕಾಲ ಕಳೆದಂತೆ ಇಂದ್ರಿಯಗಳ ಶಕ್ತಿ ಕಡಿಮೆಯಾಗಿ ಅಂತಿಮ ಘಟ್ಟದಲ್ಲಿ ಸಾವು ಸಂಭವಿಸುತ್ತದೆ. ಆದರೆ ಸುರೇಶ್ ಈ ಬಗ್ಗೆ ಅನೇಕ ವೈದ್ಯರನ್ನು ಸಂಪರ್ಕಿಸಿದರೂ, ಸೂಕ್ತ ರೀತಿಯ ಚಿಕಿತ್ಸೆ ದೊರೆತಿರಲಿಲ್ಲ. ಇದರಿಂದ ಭಾರೀ ಸಮಸ್ಯೆ ಎದುರಿಸಿದೆ ಎಂದು ಸುರೇಶ್ ಬೇಸರ ವ್ಯಕ್ತಪಡಿಸಿದ್ದಾರೆ.

ಸಿಂಡ್ರೋಮ್ ಬಗ್ಗೆ ಮಾತನಾಡಿರುವ ವೈದ್ಯ ಸುನೀಲ್, ಈತನಿಗಿದ್ದ ಮುಖದ ಆಕಾರ ಸಮಸ್ಯೆಯನ್ನು ಪ್ಲಾಸ್ಟಿಕ್ ಸರ್ಜರಿ ಮೂಲಕ ಸರಿಪಡಿಸಲಾಗಿದೆ. ಆದರೆ ಚಿಕಿತ್ಸೆಗೆ ಭರಿಸುವಷ್ಟು ಹಣವಿಲ್ಲದಿರುವುದರಿಂದ ಉಚಿತವಾಗಿಯೇ ಚಿಕಿತ್ಸೆ ನೀಡಿದ್ದೇವೆ ಎಂದು ತಿಳಿಸಿದ್ದಾರೆ. ಇದೀಗ ವ್ಯಕ್ತಿ ಈ ಹಿಂದೆ ಇದ್ದ ಫೋಟೊ ಹಾಗೂ ಚಿಕಿತ್ಸೆ ಬಳಿಕ ಬದಲಾಗಿರುವ ಮುಖದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿದ್ದು ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...