alex Certify
ಕನ್ನಡ ದುನಿಯಾ       Mobile App
       

Kannada Duniya

ಡ್ರೈವಿಂಗ್ ಲೈಸೆನ್ಸ್ ಗೆ ಕಡ್ಡಾಯವಾಗಲಿದೆ ಆಧಾರ್ ಕಾರ್ಡ್

ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮತ್ತು ಭಾರತದ ರಸ್ತೆ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಹೊಸ ಸಾರಿಗೆ ನಿಯಮಗಳನ್ನ ಜಾರಿಗೆ ತರೋದಕ್ಕೆ ಸರ್ಕಾರ ನಿರ್ಧರಿಸಿದೆ. ಹೊಸ ಸಾರಿಗೆ ನಿಯಮಗಳ ಪ್ರಕಾರ ಇನ್ಮುಂದೆ ಚಾಲನಾ ಪರವಾನಗಿ ಪತ್ರ ಅಂದ್ರೆ ಡ್ರೈವಿಂಗ್ ಲೈಸೆನ್ಸ್ ಪಡೆಯೋದಕ್ಕೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸಲಾಗ್ತಿದೆ.

ಹಲವು ದಿನಗಳಿಂದ ಸಂಸತ್ನಲ್ಲಿ ಅನುಮೋದನೆ ಸಿಗದೆ ಉಳಿದಿದ್ದ ಮೋಟಾರು ವಾಹನ ಸುರಕ್ಷತಾ ನಿಯಮಗಳಿಗೆ ಈಗ ಲೋಕಸಭೆಯಿಂದ ಅಂಗೀಕಾರ ಸಿಕ್ಕಿದೆ. ಹೊಸ ನಿಯಮಗಳ ಪ್ರಕಾರ ವಾಹನ ಸವಾರರು ಸಾರಿಗೆ ಇಲಾಖೆಯಿಂದ ಪಡೆದುಕೊಳ್ಳಬೇಕಿರುವ ಡ್ರೈವಿಂಗ್ ಲೈಸೆನ್ಸ್ ಗೆ ಆಧಾರ್ ನಂಬರ್ ಲಿಂಕ್ ಮಾಡಬೇಕಿದೆ.

ಸಂಚಾರಿ ನಿಯಮಗಳ ಉಲ್ಲಂಘನೆಗೆ ಸರ್ಕಾರ ವಿಧಿಸುವ ದಂಡದ ಮೊತ್ತವನ್ನು ಹೆಚ್ಚಿಸಲಾಗ್ತಿದೆ. ಅಪ್ರಾಪ್ತರ ವಾಹನ ಚಾಲನೆಯಿಂದ ಆಗುವಂತಾ ಯಡವಟ್ಟುಗಳಿಗೆ ವಾಹನದ ಮಾಲೀಕರೇ ಹೊಣೆಯಾಗಲಿದ್ದಾರೆ. ಅಲ್ಲದೇ ಇದರಿಂದಾಗಿ ವಾಹನದ ನೊಂದಣಿಯನ್ನ ಸಾರಿಗೆ ಇಲಾಖೆ ರದ್ದುಗೊಳಿಸುವ ಶಿಕ್ಷೆ ವಿಧಿಸಬಹುದಾಗಿದೆ.

ರಸ್ತೆ ಅಪಘಾತಗಳಲ್ಲಿ ಗಾಯಗೊಳ್ಳುವವರನ್ನು ಸಾರ್ವಜನಿಕರು ತಮಗೆ ತೊಂದರೆ ಆಗುತ್ತದೆ ಎಂದು ಸಹಾಯ ಮಾಡದಂತೆ ಸುಮ್ಮನಿರುವ ಹಾಗಿಲ್ಲ. ಗಾಯಾಳುಗಳನ್ನ ಸಾರ್ವಜನಿಕರು ಯಾವುದೇ ಹಿಂಜರಿಕೆ ಇಲ್ಲದೆ ಆಸ್ಪತ್ರೆಗೆ ಸೇರಿಸಬಹುದು. ಪೊಲೀಸರಿಗೆ ಅಥವಾ ಆಸ್ಪತ್ರೆ ಸಿಬ್ಬಂದಿಗೆ ತಮ್ಮ ಗುರುತನ್ನು ನೀಡಬಹುದಾದ ಆಯ್ಕೆ ಸಾರ್ವಜನಿಕರಿಗೆ ಸೇರಿದ್ದಾಗಿರುತ್ತದೆ.

ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ರೆ ಇರುವ ದಂಡದ ಮೊತ್ತವನ್ನು 2000 ರೂಪಾಯಿಯಿಂದ 10,000 ರೂಪಾಯಿಗೆ ಏರಿಸಲಾಗುತ್ತದೆಯಂತೆ. ವೇಗದ ವಾಹನ ಚಾಲನೆ, ಸೀಟ್ ಬೆಲ್ಟ್ ಧರಿಸದೆ ಚಾಲನೆ ಮಾಡಿದ ಪಕ್ಷದಲ್ಲೂ 2000 ರೂಪಾಯಿಯ ದಂಡ 10 ಸಾವಿರಕ್ಕೆ ಏರಿಕೆಯಾಗಲಿದೆ. ಅಜಾಗರೂಕತೆಯಿಂದ ಚಾಲನೆ ಮಾಡಿದ ಪಕ್ಷದಲ್ಲಿ 5000 ರೂಪಾಯಿ ದಂಡ ಕಟ್ಟಬೇಕಾಗುತ್ತದೆ.

ಪ್ರತ್ಯೇಕ ಮೋಟಾರು ಅಪಘಾತ ಪರಿಹಾರ ವಿಮೆಯನ್ನ ಸಂಸ್ಥೆಗಳು ವಾಹನ ಸವಾರರಿಗೆ ನೀಡಬೇಕಿದೆ. ಅಪಘಾತಗಳಿಗೆ ಕಾರಣವಾಗಬಹುದಾದ ಹದಗೆಟ್ಟ ರಸ್ತೆ ನಿರ್ಮಾಣ, ತಪ್ಪು ತಪ್ಪಾದ ರಸ್ತೆ ವಿನ್ಯಾಸ, ಅವೈಜ್ಞಾನಿಕ ರಸ್ತೆ ಕಾಮಗಾರಿಗಳಿಗೆ ಸಂಬಂಧಪಟ್ಟ ಸಂಸ್ಥೆಗಳು ಹೊಣೆಯನ್ನ ಹೊರಬೇಕಾಗಲಿದೆ. ವಿಮೆ ನವೀಕರಣ ಅವಧಿಯನ್ನ ಒಂದು ವರ್ಷದಿಂದ ಒಂದು ತಿಂಗಳಿಗೆ ಹೆಚ್ಚಿಸಲಾಗಿದೆ.

ಅಲ್ಲದೇ ಹಿಟ್ ಅಂಡ್ ರನ್ ಕೇಸ್ ಗಳಲ್ಲಿ ಸರ್ಕಾರದಿಂದ ಸಿಕ್ತಿದ್ದ ಪರಿಹಾರದ ಮೊತ್ತ 25 ಸಾವಿರ ರೂಪಾಯಿಯಿಂದ 1ಲಕ್ಷಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಲೋಕಸಭೆಯಲ್ಲಿ ಅಂಗಗೀಕಾರಗೊಂಡಿರುವ ಈ ನೂತನ ಮಸೂದೆಗೆ ಪ್ರಸ್ತುತ ರಾಜ್ಯಸಭಾ ಅಧಿವೇಶದಲ್ಲೇ ಅನುಮೋದನೆ ಸಿಗಲಿದೆ ಅಂತ ಹೇಳಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...