alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ರಿಮಿನಲ್ ಕೃತ್ಯಗಳಲ್ಲಿ ಶಾಸಕಿ ಪತಿಯೂ ಕಡಿಮೆಯೇನಿಲ್ಲ

BindiYadav_ANIತನ್ನ ಕಾರನ್ನು ಓವರ್ ಟೇಕ್ ಮಾಡಿದನೆಂಬ ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಯೊಬ್ಬನನ್ನು ಬಿಹಾರದ ಜೆಡಿಯು ವಿಧಾನಪರಿಷತ್ ಸದಸ್ಯೆ ಮನೋರಮಾ ದೇವಿ ಬಿಂದಿ ಯಾದವ್ ಅವರ ಪುತ್ರ ರಾಕಿ ಯಾದವ್ ಹತ್ಯೆ ಮಾಡಿ ಇದೀಗ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾನೆ.

ಬಂಧನವಾದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ರಾಕಿ ಯಾದವ್, ಘಟನೆ ನಡೆದ ದಿನದಂದು ತಾನು ದೆಹಲಿಯಲ್ಲಿದ್ದೇ ಎಂದು ಹೇಳಿದ್ದಾನಲ್ಲದೇ ತನ್ನ ತಾಯಿ ಬರಲು ಹೇಳಿದ ಕಾರಣಕ್ಕೆ ಬಂದಿರುವುದಾಗಿ ತಿಳಿಸಿದ್ದು, ಪೊಲೀಸರು ವೃಥಾ ತನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಲು ಯತ್ನಿಸಿದ್ದಾರೆಂದು ತಿಳಿಸಿದ್ದಾನೆ.

ಆದರೆ ಈ ಮೊದಲು ಪೊಲೀಸರಿಂದ ಬಂಧನಕ್ಕೊಳಗಾಗಿರುವ ರಾಕಿ ಯಾದವ್ ತಂದೆ ಬಿಂದೇಶ್ವರ್ ಪ್ರಸಾದ್ ಯಾದವ್ ಅಲಿಯಾಸ್ ಬಿಂದಿ ಯಾದವ್ ತಮ್ಮ ಪುತ್ರ ಆಕಸ್ಮಿಕವಾಗಿ ಈ ಕೃತ್ಯವೆಸಗಿರುವುದಾಗಿ ಹೇಳಿಕೆ ನೀಡಿದ್ದರು. ಇದೀಗ ಬಿಂದಿ ಯಾದವ್ ಕುರಿತ ಮಾಹಿತಿಗಳು ಹೊರ ಬೀಳುತ್ತಿದ್ದು, ಈತನ ವಿರುದ್ದ ಡಜನ್ ಗಟ್ಟಲೆ ಕ್ರಿಮಿನಲ್ ಪ್ರಕರಣಗಳು ಈ ಹಿಂದೆ ದಾಖಲಾಗಿವೆ ಎನ್ನಲಾಗಿದೆ. ಹತ್ಯೆ, ಅಪಹರಣದಂತಹ ಗಂಭೀರ ಪ್ರಕರಣಗಳು ಬಿಂದಿ ಯಾದವ್ ವಿರುದ್ದ ದಾಖಲಾಗಿದ್ದು, ಈತನ ಪುತ್ರ ಈಗ ಅಮಾಯಕ ವಿದ್ಯಾರ್ಥಿಯೊಬ್ಬನನ್ನು ಹತ್ಯೆ ಮಾಡಿ ಜೈಲು ಪಾಲಾಗಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...