alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಡಿಲಿಗೆ ಬಲಿಯಾದ್ರು 17 ಮಂದಿ

odisha lightningಒಡಿಶಾದಲ್ಲಿ ಬುಧವಾರದಂದು 17 ಮಂದಿ ಸಿಡಿಲಿಗೆ ಬಲಿಯಾಗಿದ್ದಾರೆ. ಅಲ್ಲದೇ 9 ಮಂದಿ ಗಾಯಗೊಂಡಿದ್ದು, ಅವರುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಡಿಲಿನ ಆರ್ಭಟಕ್ಕೆ 21 ಜಾನುವಾರುಗಳೂ ಸಾವನ್ನಪ್ಪಿವೆ.

ಒಡಿಶಾದ ದಕ್ಷಿಣ ಭಾಗ ಹಾಗೂ ಕರಾವಳಿಯಲ್ಲಿ ಭಾರೀ ಮಳೆಯಾಗಿದ್ದು, ಜೊತೆಗೆ ಮಿಂಚು, ಸಿಡಿಲಿನ ಆರ್ಭಟವೂ ಜೋರಾಗಿತ್ತು. ಅದರಲ್ಲೂ ಕೆಂಡ್ರಾಪಾಡಾ, ಭದ್ರಕ್, ಗಂಜಾಂ, ಕುರ್ದ್ ಹಾಗೂ ಮಯೂರ್ ಭಂಜ್ ಜಿಲ್ಲೆಗಳಲ್ಲಿ ಸಾವು- ನೋವು ಹೆಚ್ಚಾಗಿ ಸಂಭವಿಸಿದೆ.

ಮೇ 1 ರಂದು ಸಿಡಿಲಿನ ಹೊಡೆತಕ್ಕೆ 8 ಮಂದಿ ಸಾವನ್ನಪ್ಪಿದ್ದು, ಈ ವರ್ಷ ಸಿಡಿಲಿಗೆ ಬಲಿಯಾದವರ ಸಂಖ್ಯೆ 85 ಕ್ಕೆ ಏರಿಕೆಯಾಗಿದೆ ಎನ್ನಲಾಗಿದೆ. ಒಡಿಶಾಕ್ಕೆ ಮುಂಗಾರು ಜೂನ್ 6 ಅಥವಾ 7 ರಂದು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...