alex Certify
ಕನ್ನಡ ದುನಿಯಾ       Mobile App
       

Kannada Duniya

ಸತ್ತ 10 ತಾಸಿನ ನಂತ್ರ ಮತ್ತೆ ಬಂತು ಉಸಿರು..!

untitled1

ಉತ್ತರ ಪ್ರದೇಶದ ಬುಲಂದಶಹರ್ ನ 90 ವರ್ಷದ ಮಹಿಳೆಯೊಬ್ಬಳು ಯಮರಾಜನನ್ನು ಭೇಟಿ ಮಾಡಿ ಬಂದಿರುವುದಾಗಿ ಹೇಳ್ತಿದ್ದಾಳೆ. ಜುಲೈ 25ರಂದು ಆಕೆ ಸಾವನ್ನಪ್ಪಿದ್ದಳಂತೆ. 10 ತಾಸಿನ ಬಳಿಕ ಆಕೆಯ ಉಸಿರು ವಾಪಸ್ ಬಂತಂತೆ. ಆ ನಂತ್ರ ಯಮರಾಜನನ್ನು ಭೇಟಿ ಮಾಡಿ ಬಂದಿರುವುದಾಗಿ ಮಹಿಳೆ ಹೇಳ್ತಿದ್ದಾಳಂತೆ.

ಹೀಗೆ ಹೇಳುತ್ತಿರುವುದು ಬಗರಾಯಿ ಗ್ರಾಮದ ನಿವಾಸಿ 90 ವರ್ಷದ  ಕೈಲಾ ದೇವಿ. ಅನೇಕ ದಿನಗಳಿಂದ ಆಕೆಯ ಆರೋಗ್ಯ ಸರಿಯಿರಲಿಲ್ಲ. ಜುಲೈ 25ರಂದು ಏನೇ ಪ್ರಯತ್ನ ಪಟ್ಟರು ಕೈಲಾ ದೇವಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಬೆಳಿಗ್ಗೆ ಆಕೆ ಸಾವನ್ನಪ್ಪಿದ್ದಳು.

ಕುಟುಂಬಸ್ಥರು,ಸಂಬಂಧಿಕರೆಲ್ಲ ಮನೆಗೆ ಬಂದ್ರು. ಅಂತಿಮ ತಯಾರಿಯ ಸಿದ್ಧತೆ ನಡೆಯುತ್ತಿತ್ತು. 10 ಗಂಟೆ ನಂತ್ರ ಶವ ಸಂಸ್ಕಾರಕ್ಕಾಗಿ ಸ್ಮಶಾನಕ್ಕೆ ಶವವನ್ನು ಹೊತ್ತೊಯ್ಯಲಾಗ್ತಿತ್ತು. ಈ ವೇಳೆ ಕೈಲಾ ದೇವಿಗೆ ಎಚ್ಚರವಾಗಿದೆ. ಆಕೆ ಮಾತನಾಡಲು ಶುರುಮಾಡಿದ್ದಾಳೆ. ಇದನ್ನು ನೋಡಿದ ಜನರು ಆಶ್ಚರ್ಯಗೊಂಡಿದ್ದಾರೆ.

ನಾಲ್ಕು ಜನರು ನನ್ನನ್ನು ಕರೆದೊಯ್ಯಲು ಬಂದಿದ್ದರು. ಅದ್ರಲ್ಲಿ ಒಬ್ಬ ದಾಡಿ ಬಿಟ್ಟಿದ್ದ. ಯಮಲೋಕಕ್ಕೆ ಕರೆದೊಯ್ದ ನಂತ್ರ ಏನೇನೋ ಪತ್ರಗಳನ್ನು ನೋಡೊದ್ರು. ನಂತ್ರ ನೀನು ಇನ್ನಷ್ಟು ದಿನ ಅಲ್ಲಿರಬೇಕೆಂದು ಹೇಳಿ ನನ್ನನ್ನು ಯಮರಾಜನೇ ಬಿಟ್ಟು ಹೋದ ಎನ್ನುತ್ತಿದ್ದಾಳೆ ಮಹಿಳೆ.

ಆಕೆ ಹೇಳೋದು ಎಷ್ಟು ನಿಜವೋ ಎಷ್ಟು ಸುಳ್ಳೋ ಗೊತ್ತಿಲ್ಲ. ಆದ್ರೆ ಆಕೆ ಸತ್ತಿರುವುದನ್ನು ವೈದ್ಯರೇ ದೃಢಪಡಿಸಿದ್ದರು. ಈಗ ಆಕೆ ಬದುಕಿರುವುದಕ್ಕೂ ಅವರೇ ಸಾಕ್ಷಿಯಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...