alex Certify
ಕನ್ನಡ ದುನಿಯಾ       Mobile App
       

Kannada Duniya

ಮ್ಯಾಕ್ಸ್ ಆಸ್ಪತ್ರೆ ಲೈಸೆನ್ಸ್ ರದ್ದು

ದೆಹಲಿಯ ಷಾಲಿಮಾರ್ ಬಾಗ್ ನಲ್ಲಿರುವ ಮ್ಯಾಕ್ಸ್ ಆಸ್ಪತ್ರೆ ವಿರುದ್ಧ ದೆಹಲಿ ಸರ್ಕಾರ ಸೂಕ್ತ ಕ್ರಮ ಕೈಗೊಂಡಿದೆ. ಬದುಕಿದ್ದ ಮಗುವನ್ನು ಸತ್ತಿದೆ ಎಂದು ಘೋಷಣೆ ಮಾಡಿದ್ದ ಆಸ್ಪತ್ರೆ ಪರವಾನಿಗೆ ರದ್ದು ಮಾಡಿದೆ.

ದೆಹಲಿ ಪೊಲೀಸ್ ಜೊತೆಗೆ ದೆಹಲಿ ಸರ್ಕಾರದ ಆರೋಗ್ಯ ಸಚಿವಾಲಯ ಮ್ಯಾಕ್ಸ್ ಆಸ್ಪತ್ರೆಗೆ ನೊಟೀಸ್ ಜಾರಿ ಮಾಡಿದೆ. ಮ್ಯಾಕ್ಸ್ ಆಸ್ಪತ್ರೆ ನಿರ್ಲಕ್ಷ್ಯಕ್ಕೆ ಸಂಬಂಧಿಸಿದಂತೆ ಈ ಹಿಂದೆಯೇ ಒಂದು ನೊಟೀಸ್ ಜಾರಿಗೊಳಿಸಲಾಗಿತ್ತು. ನವಜಾತ ಶಿಶು ಪ್ರಕರಣದಲ್ಲಿ ಮತ್ತೊಂದು ನೊಟೀಸ್ ಜಾರಿಯಾಗಿತ್ತು. ಇನ್ನೊಮ್ಮೆ ಇಂಥ ಪ್ರಕರಣ ಮರುಕಳಿಸಿದ್ರೆ ಪರವಾನಿಗೆ ರದ್ದು ಮಾಡುವುದಾಗಿ ಎಚ್ಚರಿಕೆ ನೀಡಲಾಗಿತ್ತು.

ತನಿಖೆಯ ಅಂತಿಮ ವರದಿ ಬಂದಿದೆ. ವರದಿ ಆಧರಿಸಿ ಮ್ಯಾಕ್ಸ್ ಆಸ್ಪತ್ರೆ ಪರವಾನಿಗೆ ರದ್ದು ಮಾಡಲಾಗಿದೆ ಎಂದು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಹೇಳಿದ್ದಾರೆ. ಆರೋಪಿ ವೈದ್ಯರ ಪ್ರಕರಣವನ್ನು ಮೆಡಿಕಲ್ ಕೌನ್ಸಿಲ್ ಗೆ ಹಸ್ತಾಂತರಿಸಲಾಗಿತ್ತು. ಅಲ್ಲಿಂದ ಅಂತಿಮ ವರದಿ ಬಂದಿದೆ ಎನ್ನಲಾಗ್ತಿದೆ. ವರದಿ ಆಧರಿಸಿ ವೈದ್ಯರ ವಿರುದ್ಧವೂ ಸೂಕ್ತ ಕ್ರಮಕೈಗೊಳ್ಳುವ ಸಾಧ್ಯತೆಯಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...