alex Certify
ಕನ್ನಡ ದುನಿಯಾ       Mobile App
       

Kannada Duniya

”ಮೋದಿ ಅಂಕಲ್ ನಮಸ್ತೆ, ನಮ್ಮ ಮನೆ ಹಿಂದಿರುವ ಮೊಸಳೆ ಓಡಿಸಿ ಪ್ಲೀಸ್”

2017_3image_11_28_306492423modi-ll

ಹರಿದ್ವಾರ ಜಿಲ್ಲೆಯ ಖಾನ್ಪುರದ ನಿವಾಸಿ 11 ವರ್ಷದ ಮಯಂಕ್, ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಬರೆದ ಪತ್ರಕ್ಕೆ ಮೋದಿ ಸ್ಪಂದಿಸಿದ್ದಾರೆ. ಮಯಾಂಕ್ ಮನೆ ಹಿಂದಿನ ಕೊಳದಲ್ಲಿರುವ ಮೊಸಳೆ ಹಿಡಿಯುವ ಕಾರ್ಯ ಶುರುವಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಮೊಸಳೆ ಹಿಡಿಯುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ವಾಸ್ತವವಾಗಿ ಮಯಾಂಕ್ ತಂದೆ ಪ್ರವೀಣ್ ಗುಪ್ತಾ ಮನೆ ಹಿಂದೆ ಮೈದಾನವೊಂದಿದೆ. ಅದ್ರ ಬಳಿ ಕೊಳವಿದ್ದು, ಅದ್ರಲ್ಲಿ ಮೊಸಳೆ ಅನೇಕ ವರ್ಷಗಳಿಂದ ವಾಸವಾಗಿದೆ. ಮೊಸಳೆ ಭಯಕ್ಕೆ ಮಕ್ಕಳಿಗೆ ಮೈದಾನದಲ್ಲಿ ಆಡಲು ಸಾಧ್ಯವಾಗ್ತಾ ಇಲ್ಲ. ಮೊಸಳೆ ಒಮ್ಮೊಮ್ಮೆ ಮೈದಾನಕ್ಕೆ ಬರುವುದಲ್ಲದೆ, ಹತ್ತಿರದ ಮನೆಗಳ ಬಳಿಯೂ ಬಂದು ಸ್ಥಳೀಯರಲ್ಲಿ ಆತಂಕ ಹುಟ್ಟಿಸುತ್ತಿದೆ.

ಈ ಬಗ್ಗೆ ಅನೇಕ ಬಾರಿ ಅರಣ್ಯ ಇಲಾಖೆಗೆ ತಿಳಿಸಲಾಗಿದೆ. ಆದ್ರೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಹಾಗಾಗಿ 11 ವರ್ಷದ ಮಯಾಂಕ್ ಪಿಎಂಗೆ ಪತ್ರ ಬರೆದಿದ್ದ. ಜನವರಿ 17 ರಂದು ”ಮೋದಿ ಅಂಕಲ್ ನಮಸ್ತೆ” ಎಂದು ಪತ್ರ ಶುರುಮಾಡಿ ತನ್ನ ಕಷ್ಟವನ್ನು ಹೇಳಿಕೊಂಡಿದ್ದ. ಇದಕ್ಕೆ ಪ್ರಧಾನ ಮಂತ್ರಿ ಸ್ಪಂದಿಸಿದ್ದಾರೆ. ಮೊಸಳೆ ಹಿಡಿಯುವ ಕಾರ್ಯ ಶುರುವಾಗಿದೆ. ಮಕ್ಕಳು ಮೋದಿ ಕಾರ್ಯಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...