alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆಗೆ ಬನ್ನಿ, ಒಂದೊಳ್ಳೆ ಚಹಾ ಮಾಡಿಕೊಡ್ತೀನಿ ಎಂದಿದ್ದ ಜಯಲಲಿತಾ

jaya

ಚೆನ್ನೈನ ಅಪೋಲೋ ಆಸ್ಪತ್ರೆಯ ಮೂವರು ನರ್ಸ್ ಗಳು ಅಂದ್ರೆ ಜಯಲಲಿತಾರಿಗೆ ಅಚ್ಚುಮೆಚ್ಚಾಗಿತ್ತು. ಅವರು ಐಸಿಯುನಲ್ಲಿದ್ದಾಗಿನಿಂದ್ಲೂ ಸೇವೆ ಮಾಡಿದ ದಾದಿಯರನ್ನು ಜಯಾ ಪ್ರೀತಿಯಿಂದ ಕಿಂಗ್ ಕೊಂಗ್ ಅಂತಾನೇ ಕರೆಯುತ್ತಿದ್ರು. ನಗುತ್ತ ಮಾತನಾಡಿಸ್ತಿದ್ರು. ನರ್ಸ್ ಗಳು ಸುತ್ತಮುತ್ತ ಇದ್ದಾಗಲೆಲ್ಲ ಕಷ್ಟಪಟ್ಟಾದ್ರೂ ಆಹಾರ ಸೇವಿಸುತ್ತಿದ್ದರಂತೆ. ಯಾವ ರೀತಿ ಆರೋಗ್ಯದ ಕಾಳಜಿ ವಹಿಸಬೇಕು ಅನ್ನೋದನ್ನು ಹೇಳಿ, ಹಾಗೆಯೇ ಮಾಡುತ್ತೇನೆ ಅಂತಾ ನರ್ಸ್ ಸಿ.ವಿ.ಶೀಲಾ ಬಳಿ ಅಮ್ಮ ಕೇಳುತ್ತಿದ್ರು.

ಊಟ ಮಾಡುವಾಗಲೆಲ್ಲ ಮೂವರು ನರ್ಸ್ ಗಳಿಗಾಗಿ ಒಂದೊಂದು ತುತ್ತು, ತಮಗಾಗಿ ಒಂದು ತುತ್ತು ತಿನ್ನುತ್ತಿದ್ರು. ಅವರ ಡಯಟ್ ನಲ್ಲಿ ಇರ್ತಾ ಇದ್ದಿದ್ದು ಉಪ್ಮಾ, ಪೊಂಗಲ್, ಮೊಸರನ್ನ ಅಥವಾ ಆಲೂಗಡ್ಡೆ ಕರಿ. ಒಟ್ಟು 16 ನರ್ಸ್ ಗಳು 3 ಶಿಫ್ಟ್ ಗಳಲ್ಲಿ ಜಯಲಲಿತಾರ ಆರೈಕೆ ಮಾಡುತ್ತಿದ್ರು. ಅವರಲ್ಲಿ ಶೀಲಾ, ರೇಣುಕಾ ಹಾಗೂ ಸಮುಂದೀಶ್ವರಿ ಅಂದ್ರೆ ಜಯಲಲಿತಾಗೆ ಅಚ್ಚುಮೆಚ್ಚಾಗಿತ್ತು. ಜಯಾ ನಿಧನದ ಬಳಿಕ ಆಸ್ಪತ್ರೆಯಲ್ಲಿ ಶ್ರದ್ಧಾಂಜಲಿ ಸಭೆ ಹಮ್ಮಿಕೊಳ್ಳಲಾಗಿತ್ತು, ಈ ವೇಳೆ ನರ್ಸ್ ಗಳೆಲ್ಲ ಜಯಾ ತಮ್ಮೊಂದಿಗೆ ಯಾವ ರೀತಿ ಇದ್ದರು ಅನ್ನೋದನ್ನು ವಿವರಿಸಿದ್ರು.

ಸಪ್ಟೆಂಬರ್ 22 ರಂದು ರಾತ್ರಿ ಅವರನ್ನು ಆಸ್ಪತ್ರೆಗೆ ತರಲಾಗಿತ್ತು, ತೀವ್ರ ಅಸ್ವಸ್ಥರಾಗಿದ್ದ ಜಯಾ 4 ಗಂಟೆಗಳ ಬಳಿಕ ಎಚ್ಚೆತ್ತಿದ್ದರು, ಸ್ಯಾಂಡ್ ವಿಚ್ ಹಾಗೂ ಕಾಫಿ ಸೇವಿಸಿದ್ದರು. ಅವರು ಆಸ್ಪತ್ರೆಯಲ್ಲಿ ಸದಾ ಆಯಾಸಗೊಂಡವರಂತೆ ಇರುತ್ತಿರಲಿಲ್ಲ, ಎಲ್ಲರ ಜೊತೆ ಮಾತನಾಡುತ್ತಿದ್ರು. ನರ್ಸ್ ಗಳಿಗೆಲ್ಲ ಚರ್ಮದ ಸೌಂದರ್ಯ ಕಾಪಾಡಿಕೊಳ್ಳುವುದು ಹೇಗೆ ಅನ್ನೋ ಬಗ್ಗೆ ಟಿಪ್ಸ್ ಕೊಡ್ತಾ ಇದ್ರು. ಒಮ್ಮೊಮ್ಮೆ ಹೇರ್ ಸ್ಟೈಲ್ ಚೇಂಜ್ ಮಾಡಿಕೊಳ್ಳುವಂತೆ ಸೂಚಿಸಿದ್ದೂ ಇದೆ. ಎಷ್ಟೇ ಬ್ಯುಸಿಯಾಗಿದ್ರೂ ನಿಮಗಾಗಿ ಕೊಂಚ ಬಿಡುವು ಮಾಡಿಕೊಳ್ಳಿ ಅನ್ನೋದು ಅವರ ಸಲಹೆಯಾಗಿತ್ತು.

ಅಪೋಲೋ ಆಸ್ಪತ್ರೆಯ ಕಾಫಿ ಜಯಲಲಿತಾರಿಗೆ ತುಂಬಾ ಇಷ್ಟವಾಗಿತ್ತಂತೆ. ಎಲ್ಲರೂ ಬನ್ನಿ ಮನೆಗೆ ಹೋಗೋಣ, ನಿಮಗೆಲ್ಲ ಕೊಡೈನಾಡುವಿನ ಅದ್ಭುತ ಚಹಾ ಮಾಡಿಕೊಡುತ್ತೇನೆ ಅಂತಾ ಜಯಲಲಿತಾ ವೈದ್ಯರು ಮತ್ತು ನರ್ಸ್ ಗಳ ಬಳಿ ಹೇಳಿದ್ದರಂತೆ. ಅಮೆರಿಕ ಮೂಲದ ರಿಚರ್ಡ್ ಬೀಲೆ,  ಚಿಕಿತ್ಸೆಗೆ ಸಹಕರಿಸಿ ನಾನು ಈ ಆಸ್ಪತ್ರೆಯ ಬಾಸ್ ಎಂದಿದ್ದರು. ಆಗ ಜಯಲಲಿತಾ ಇಡೀ ರಾಜ್ಯವೇ ನನ್ನದು ಎಂದಿದ್ದರಂತೆ. ‘ಜಯಾ ಟಿವಿ’ ಯಲ್ಲಿ ಪಕ್ಷದ ಉಪಚುನಾವಣೆ ಗೆಲುವಿನ ಸುದ್ದಿ ನೋಡಿ ಖುಷಿಪಟ್ಟಿದ್ದರು ಅಮ್ಮ.

ಆದ್ರೆ ಭಾನುವಾರದ ಸಂಜೆ ಮಾತ್ರ ಅವರ ಪಾಲಿಗೆ ಕರಾಳವಾಗಿತ್ತು. ಜಯಲಲಿತಾ ಹಳೆಯ ದೈನಿಕ ಧಾರಾವಾಹಿಯನ್ನು ವೀಕ್ಷಿಸುತ್ತ ಕುಳಿತಿದ್ದರು, ಅವರಲ್ಲಿ ಉಸಿರಾಟವಿರಲಿಲ್ಲ, ದೇಹ ನಿಶ್ಚಲವಾಗಿತ್ತು. ಕೂಡಲೇ ವೆಂಟಿಲೇಟರ್ ಅಳವಡಿಸಿದ್ರೂ ಪ್ರಯೋಜನವಾಗಲಿಲ್ಲ. ಅವರಿಗೆ ಕಾರ್ಡಿಯಾಕ್ ಅರೆಸ್ಟ್ ಸಂಭವಿಸಿತ್ತು. ಸೋಮವಾರ ಜಯಲಲಿತಾ ಇನ್ನಿಲ್ಲ ಎಂಬ ಸುದ್ದಿಯನ್ನು ಪ್ರಕಟಿಸಲಾಯ್ತು. ಅದಾಗಿ ಮೂರು ದಿನಗಳೇ ಕಳೆದಿವೆ, ಈಗ ಆಸ್ಪತ್ರೆಯಲ್ಲಿ ನೀರವ ಮೌನ. ನಮ್ಮನ್ನೆಲ್ಲ ಅಮ್ಮ ತಮಿಳುನಾಡು ವಿಧಾನಸಭೆಗೆ ಕರೆದೊಯ್ಯುತ್ತೇನೆ ಎಂದಿದ್ದರು ಅಂತಾ ಹೇಳಿದ ನರ್ಸ್ ಶೀಲಾಳ ಕಣ್ಣಲ್ಲಿ ನೀರಿತ್ತು, ಧ್ವನಿ ನಡುಗುತ್ತಿತ್ತು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...