alex Certify
ಕನ್ನಡ ದುನಿಯಾ       Mobile App
       

Kannada Duniya

ಕಸವನ್ನು ಕಾಲುವೆಗೆ ಎಸೆದಿದ್ದವನಿಗೆ ಸಿಕ್ಕ ಶಿಕ್ಷೆ ಏನು ಗೊತ್ತಾ…?

ಭಾರತದಲ್ಲಿ ಸ್ವಚ್ಛತೆಯ ಅರಿವು ಬಲು ಕಮ್ಮಿ. ಪ್ರಧಾನಿ ನರೇಂದ್ರ ಮೋದಿಯವರು ಭಾರತೀಯರಲ್ಲಿ ಸ್ವಚ್ಛತೆಯ ಅರಿವು ಮೂಡಿಸುವ ಸಲುವಾಗಿ ಸ್ವಚ್ಛ ಭಾರತ್ ಅಭಿಯಾನವನ್ನು ಆರಂಭಿಸಿದ್ದರೂ ಅದಕ್ಕೆ ಸಿಕ್ಕ ಸ್ಪಂದನೆ ಅಷ್ಟಕಷ್ಟೇ.

ಗುಟ್ಕಾ ಹಾಕಿಕೊಂಡು ಎಲ್ಲೆಂದರಲ್ಲಿ ಉಗುಳುವುದು, ಖಾಲಿ ಸೈಟ್ ಕಂಡಲ್ಲಿ ಕಸ ಎಸೆಯುವುದು ಮಾಮೂಲಿ ಸಂಗತಿ. ಹೀಗೆ ಕಾಲುವೆಯಲ್ಲಿ ಕಸವನ್ನು ಎಸೆದಿದ್ದ ವ್ಯಕ್ತಿಯೊಬ್ಬನಿಗೆ ಮರೆಯಲಾಗದ ಪಾಠ ಕಲಿಸಿದ ಘಟನೆ ಗುಜರಾತಿನ ಅಹಮದಾಬಾದ್ ನಲ್ಲಿ ನಡೆದಿದೆ.

ಗುರುವಾರದಂದು ಸ್ಕೂಟರ್ ನಲ್ಲಿ ಬಂದ ವ್ಯಕ್ತಿಯೊಬ್ಬ ಕಾಲುವೆಯೊಂದರಲ್ಲಿ ತಾನು ಸಂಗ್ರಹಿಸಿಟ್ಟುಕೊಂಡು ತಂದಿದ್ದ ಕಸವನ್ನು ಎಸೆದಿದ್ದ. ಆತನ ಗ್ರಹಚಾರ ಸರಿ ಇರಲಿಲ್ಲವೇನೋ? ಇದೆ ಸಂದರ್ಭದಲ್ಲಿ ಅಹ್ಮದಾಬಾದ್ ಮುನ್ಸಿಪಲ್ ಕಮಿಷನ್ ನ ನಿರ್ದೇಶಕ ಹರ್ಷದ್ ಸೋಳಂಕಿ ಅದೇ ಮಾರ್ಗವಾಗಿ ಸಾಗುತ್ತಿದ್ದರು.

ಸ್ಕೂಟರ್ ನಲ್ಲಿ ಬಂದ ವ್ಯಕ್ತಿ ಕಾಲುವೆಗೆ ಕಸವನ್ನು ಎಸೆದಿದ್ದು ಗಮನಕ್ಕೆ ಬರುತ್ತಲೇ ಆತನ ಬಳಿಗೆ ತೆರಳಿದ ಅವರು, ಕಾಲುವೆಗೆ ಎಸೆದಿದ್ದು ಏನು ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಆತ ಇದನ್ನು ಕೇಳಲು ನೀವ್ಯಾರು ಎಂದು ಉದ್ದಟತನದಿಂದ ಉತ್ತರಿಸಿದ್ದಾನೆ.

ಆಗ ತಮ್ಮ ಪರಿಚಯ ಹೇಳಿಕೊಂಡ ಹರ್ಷದ್ ಸೋಳಂಕಿ, ಆರು ತಿಂಗಳ ಕಾಲ ಜೈಲಿಗೆ ಹೋಗುತ್ತೀಯಾ ಅಥವಾ 5 ಸಾವಿರ ರೂ. ದಂಡ ಕೊಡುತ್ತೀಯಾ ಇಲ್ಲವೇ ಕಾಲುವೆಗೆ ಇಳಿದು ಎಸೆದಿದ್ದ ಕಸವನ್ನು ವಾಪಸ್ ತಂದು ಇಲ್ಲಿ ಇಟ್ಟಿರುವ ಕಸದ ಬುಟ್ಟಿಗೆ ಹಾಕುತ್ತೀಯ ಎಂದು ಕೇಳಿದ್ದಾರೆ.

ಇದರಿಂದ ಕಂಗಾಲಾದ ಆತ, ಕೊಳಚೆ ತುಂಬಿದ ಕಾಲುವೆಗೆ ಮೂಗು ಮುಚ್ಚಿಕೊಂಡು ಕೆಳಗಿಳಿದು ತಾನು ಎಸೆದಿದ್ದ ಕಸವನ್ನು ಮೇಲೆ ತಂದು ಹಾಕಿದ್ದಾನೆ. ಹರ್ಷದ್ ಸೋಳಂಕಿ ಅವರ ಕಾರ್ಯವನ್ನು ಸ್ಥಳದಲ್ಲಿ ನೆರೆದಿದ್ದ ಸಾರ್ವಜನಿಕರು ಮುಕ್ತ ಕಂಠದಿಂದ ಪ್ರಶಂಸಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...