alex Certify
ಕನ್ನಡ ದುನಿಯಾ       Mobile App
       

Kannada Duniya

ಸರ್ಜಿಕಲ್ ಸ್ಟ್ರೈಕ್ ಗೆ ನೆರವಾಗಿದ್ದು ಚಿರತೆ ಮೂತ್ರ…!

ನವದೆಹಲಿ: ಇಡೀ ವಿಶ್ವದ ಗಮನ ಸೆಳೆದ ಪಾಕ್ ವಿರುದ್ಧದ ಭಾರತದ ಸರ್ಜಿಕಲ್ ಸ್ಟ್ರೈಕ್ ನಲ್ಲಿ ಚಿರತೆ ಮೂತ್ರ ಬಳಸಲಾಗಿತ್ತು ಎಂಬ ಸಂಗತಿ ಬಹಿರಂಗವಾಗಿದೆ.

2016ರಲ್ಲಿ ಭಾರತೀಯ ಸೇನೆ ಪಾಕ್ ಪ್ರಾಂತ್ಯದೊಳಗೆ ನುಗ್ಗಿ ಶತ್ರು ರಾಷ್ಟ್ರದ ವಿದ್ವಂಸಕರನ್ನು ಸದೆಬಡಿದಿತ್ತು. ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಹಿರಿಯ ಸೇನಾಧಿಕಾರಿ ಲೆ.ಜನರಲ್ ರಾಜೇಂದ್ರ ನಿಂಬೋರ್ಕರ್ ಅವರು ಪುಣೆಯಲ್ಲಿ ಅಭಿನಂದನೆ ಸ್ವೀಕಾರ ಸಮಾರಂಭದಲ್ಲಿ ಈ ವಿಷಯ ಬಹಿರಂಗಪಡಿಸಿದರು.

ಶತ್ರು ರಾಷ್ಟ್ರದೊಳಗೆ ನುಗ್ಗಿದ ಮುಂಚೂಣಿ ಪಡೆಗಳು ಚಿರತೆ ಮೂತ್ರದೊಂದಿಗೆ ತೆರಳಿತ್ತು. ಈ ರೀತಿ ಒಳನುಗ್ಗಿದಾಗ ಅಲ್ಲಿನ ನಾಯಿಗಳು ಬೊಗಳುವ ಸಾಧ್ಯತೆ ಇರುತ್ತದೆ. ಚಿರತೆ ಮೂತ್ರದ ಸಿಂಪಡೆಯಿಂದ ನಾಯಿಗಳು ಹೆದರಿ ಓಡುತ್ತವೆ. ಚಿರತೆಗಳಿಗೆ ನಾಯಿ ಹೆದರುತ್ತವೆ. ನಮ್ಮ ಈ ಪ್ರಯತ್ನ ಫಲ‌ನೀಡಿತು ಎಂದವರು ಸಮಾರಂಭದಲ್ಲಿ ತಿಳಿಸಿದರು.

ನೌಶೇರಾ ವಲಯದ ಬ್ರಿಗೇಡ್ ಕಮಾಂಡರ್ ಆಗಿದ್ದ ನಿಂಬೋರ್ಕರ್, ಆ ಭೂಪ್ರದೇಶದ ಜೀವವೈವಿಧ್ಯದ ಬಗ್ಗೆ ಒಂದು ವಿಸ್ತೃತವಾದ ಅಧ್ಯಯನವನ್ನು ಕೈಗೊಂಡಿದ್ದರಂತೆ.

ಸೇನಾ ಕಾರ್ಯತಂತ್ರವಾಗಿ ಯೋಧರು ಹಳ್ಳಿಗಳನ್ನು ದಾಟುವಾಗ ಹಳ್ಳಿಗಳ ಹೊರಗೆ ಚಿರತೆ ಮೂತ್ರವನ್ನು ಸಿಂಪಡಿಸುತ್ತಾರೆ. ಈ ತಂತ್ರವು ಉತ್ತಮವಾಗಿ ಕೆಲಸ ಮಾಡಿದೆ ಎಂದು ಅವರು ಹೇಳಿದರು.

ಪಾಕಿಸ್ತಾನದ ಭೂಪ್ರದೇಶದೊಳಗೆ 15 ಕಿ.ಮೀ. ಅಪಾಯಕಾರಿ ಕಾರ್ಯಾಚರಣೆಯಲ್ಲಿ ತಂಡಗಳು ಪಾಲ್ಗೊಂಡಿದ್ದವೆಂದರು. ಈ ಕಾರ್ಯಾಚರಣೆಯಲ್ಲಿ ಭಯೋತ್ಪಾದಕರ ‌ಮೂರು ನೆಲೆ ನಾಶ ಹೊಂದಿದರೆ, ಇಪ್ಪತ್ತೊಂಬತ್ತು ಭಯೋತ್ಪಾದಕರು ಹತರಾಗಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...