alex Certify
ಕನ್ನಡ ದುನಿಯಾ       Mobile App
       

Kannada Duniya

ಕೊನೆಗೂ ಸೆರೆಯಾಯ್ತು ಮನೆಗೆ ನುಗ್ಗಿದ್ದ ಚಿರತೆ

ಸತತ ಮೂರು ದಿನಗಳಿಂದ ಸ್ಥಳೀಯರ ಪಾಲಿಗೆ ಜೀವ ಭಯವನ್ನು ಹುಟ್ಟಿಸಿದ್ದ ಹೆಣ್ಣು ಚಿರತೆಯನ್ನ ಅರಣ್ಯ ಇಲಾಖೆ ಸಿಬ್ಬಂದಿ ಸತತ 9 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಸೆರೆಹಿಡಿದಿದ್ದಾರೆ. ಮಹಾರಾಷ್ಟ್ರದ ಗೋಂಡಿಯಾ ಜಿಲ್ಲೆಯ ಮನೆಯೊಂದರಲ್ಲಿ ಅಡಗಿದ್ದ ಚಿರತೆಯನ್ನು ಹರಸಾಹಸ ಪಟ್ಟು ಸೆರೆಹಿಡಿಯಲಾಗಿದೆ.

ಬರಾದ್ ಟೋಲಿ ಗ್ರಾಮದ ಮನಸಾರಾಮ್ ಕಾಂಬ್ಳೆ ಎನ್ನುವವರ ಮನೆಯನ್ನ ಚಿರತೆ ಹೊಕ್ಕುಬಿಟ್ಟಿತ್ತು. ಆಹಾರ ಹುಡುಕಿಕೊಂಡು ಕಾಡಿನಿಂದ ನಾಡಿಗೆ ಬಂದಿದ್ದ ಚಿರತೆ ಮೂರು ದಿನಗಳ ಹಿಂದಿನಿಂದಲೇ ಗ್ರಾಮದಲ್ಲಿ ಅನೇಕ ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸಿ ತಿಂದು ಹಾಕಿತ್ತು. ಚಿರತೆ ಓಡಾಟದ ಬಗ್ಗೆ ಭಯಭೀತರಾದ ಜನರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.

ಆನಂತರದಲ್ಲಿ ಬುಧವಾರ ಮುಂಜಾನೆ ಕಾಂಬ್ಳೆ ಎನ್ನುವವರ ಮನೆಯನ್ನು ಹೊಕ್ಕ ಚಿರತೆಯಿಂದ ಕಾಂಬ್ಳೆ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದರು. ಬಳಿಕ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಹೊಗೆ ಹಾಕಿ, ಪಟಾಕಿ ಹಚ್ಚಿ ಚಿರತೆಯನ್ನ ಬಂಧಿಸುವ ಕಾರ್ಯಾಚರಣೆ ನಡೆಸಿ ಕೊನೆಗೆ ಯಶಸ್ವಿಯಾದ್ರು. ಬಂಧಿಸಿದ ಚಿರತೆಯನ್ನು ಅರಣ್ಯ ಇಲಾಖೆ ಬುಧವಾರ ಸಂಜೆ ವೇಳೆಗೆ ಕಾಡಿಗೆ ಬಿಟ್ಟಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...