alex Certify
ಕನ್ನಡ ದುನಿಯಾ       Mobile App
       

Kannada Duniya

8ನೇ ಕ್ಲಾಸ್ ವಿದ್ಯಾರ್ಥಿಗೆ 1 ಕೋಟಿ ರೂ. ಲೀಗಲ್ ನೋಟಿಸ್ ನೀಡಿದ ಸ್ಕೂಲ್..!

notice

ಆಗ್ರಾದ ಸೇಂಟ್ ಫ್ರಾನ್ಸಿಸ್ ಸ್ಕೂಲ್, 8ನೇ ಕ್ಲಾಸ್ ನಲ್ಲಿ ಓದುತ್ತಿರುವ ವಿದ್ಯಾರ್ಥಿಗೆ 1 ಕೋಟಿ ರೂಪಾಯಿಯ ಲೀಗಲ್ ನೋಟಿಸ್ ನೀಡಿದೆ. ಒಂದು ಕೋಟಿಗಾಗಿ ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿಯಿಂದ ಆರ್ಥಿಕ ನೆರವು ಕೇಳುತ್ತೇನೆ. ಅಲ್ಲಿ ಸಿಗದಿದ್ದಲ್ಲಿ ಭಿಕ್ಷೆ ಬೇಡುತ್ತೇನೆ ಎಂದಿದ್ದಾರೆ ವಿದ್ಯಾರ್ಥಿ  ತಂದೆ.

ನ್ಯೂ ಆಗ್ರಾದಲ್ಲಿ ವಾಸಿಸುವ ಸಗೀರ್ ಅಹಮ್ಮದ್ ತನ್ನ ಮಗ ಮೊಹಮ್ಮದ್ ಶಹಜಾನ್ ನನ್ನು ಸೇಂಟ್ ಫ್ರಾನ್ಸಿಸ್ ಸ್ಕೂಲ್ ಗೆ ಸೇರಿಸಿದ್ದ. ಶಹಜಾನ್ ಎಲ್ ಕೆ ಜಿಯಿಂದ ಹಿಡಿದು 8ನೇ ತರಗತಿಯವರೆಗೆ ಇದೇ ಸ್ಕೂಲಿನಲ್ಲಿ ಓದಿದ್ದಾನೆ. ಆದ್ರೆ 8ನೇ ತರಗತಿಯಲ್ಲಿ ಬಂದ ಪರೀಕ್ಷಾ ಫಲಿತಾಂಶದ ನಂತರ ಶಹಜಾನ್ ನನ್ನು ಮುಂದಿನ ಕ್ಲಾಸಿಗೆ ಕಳುಹಿಸಲು ಸ್ಕೂಲಿನವರು ನಿರಾಕರಿಸಿದ್ದಾರೆ.

ಇದರಿಂದ ಕಂಗಾಲಾದ ಪಾಲಕರು ಶಾಲೆಗೆ ವಕೀಲರ ನೆರವಿನಿಂದ ಲೀಗಲ್ ನೋಟಿಸ್ ನೀಡಿದ್ದಾರೆ. 10ನೇ ತರಗತಿಯವರೆಗೆ ಮಕ್ಕಳನ್ನು ಫೇಲ್  ಮಾಡುವಂತಿಲ್ಲ. ಶಹಜಾನ್ ಜೊತೆ ಈ ರೀತಿ ನಡೆದುಕೊಳ್ಳಲು ಕಾರಣವೇನೆಂದು ನೋಟಿಸ್ ನಲ್ಲಿ ಕೇಳಲಾಗಿದೆ. ಜೊತೆಗೆ ಸ್ಕೂಲ್ ನವರು ಹಣದ ಬೇಡಿಕೆ ಇಟ್ಟಿದ್ದಾರೆಂದು ಆರೋಪಿಸಲಾಗಿದೆ.

ಈ ಬಗ್ಗೆ ಶಿಕ್ಷಣ ಇಲಾಖೆಗೆ ಕೂಡ ದೂರು ನೀಡಲಾಗಿದೆ. ಶಿಕ್ಷಣ ಇಲಾಖೆಯಿಂದಲೂ ಶಾಲೆಗೆ ನೋಟಿಸ್ ಕಳುಹಿಸಲಾಗಿದೆ. ಆದ್ರೆ ಅದ್ಯಾವುದಕ್ಕೂ ಉತ್ತರ ನೀಡದ ಸ್ಕೂಲ್, ವಕೀಲರ ಮೂಲಕ ವಿದ್ಯಾರ್ಥಿಗೆ 1 ಕೋಟಿ ರೂಪಾಯಿಯ ಲೀಗಲ್ ನೋಟಿಸ್ ನೀಡಿದೆ. ವಿಶ್ವಾಸಾರ್ಹ ಸಂಸ್ಥೆ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ ಎಂದು ದೂರಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...