alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಲಾಸ್ ರೂಂ ನಲ್ಲೇ ಉಪನ್ಯಾಸಕನ ರೌದ್ರಾವತಾರ

hyder-colega

ಹೈದರಾಬಾದ್: ಹೈದರಾಬಾದ್ ಕಾಲೇಜ್ ನಲ್ಲಿ ಉಪನ್ಯಾಸಕನೊಬ್ಬ, ಹೋಂ ವರ್ಕ್ ಮಾಡದ ವಿದ್ಯಾರ್ಥಿಯನ್ನು ಮನಬಂದಂತೆ ಥಳಿಸಿದ್ದಾನೆ.

ಹೈದರಾಬಾದ್ ಎಸ್.ಆರ್. ನಗರದಲ್ಲಿರುವ ಚೈತನ್ಯ ಜೂನಿಯರ್ ಕಾಲೇಜ್ ನಲ್ಲಿ ಭೌತಶಾಸ್ತ್ರ ಉಪನ್ಯಾಸಕ ದೊರೆಬಾಬು ವಿದ್ಯಾರ್ಥಿ ಮೇಲೆ ಕೋಲಿನಿಂದ ಅಮಾನವೀಯವಾಗಿ ಹಲ್ಲೆ ನಡೆಸಿದ್ದಾನೆ.

ರೌಡಿಗಳ ರೀತಿಯಲ್ಲಿ ವಿದ್ಯಾರ್ಥಿ ಮೇಲೆ ದೊರೆಬಾಬು ಹಲ್ಲೆ ಮಾಡಿರುವ ದೃಶ್ಯಗಳನ್ನು ಸೆರೆ ಹಿಡಿದ ಕೆಲ ವಿದ್ಯಾರ್ಥಿಗಳು ಪೋಷಕರಿಗೆ ತೋರಿಸಿದ್ದಾರೆ.

ಪೋಷಕರು ಎನ್.ಜಿ.ಓ. ನೆರವಿನಿಂದ ಹೈದರಾಬಾದ್ ನ ಪಶ್ಚಿಮ ಡಿ.ಸಿ.ಪಿ. ಗೆ ದೂರು ನೀಡಿದ್ದು, ಹಲ್ಲೆ ಮಾಡಿದ ದೊರೆಬಾಬುನನ್ನು ಕಾಲೇಜಿನ ಆಡಳಿತ ಮಂಡಳಿ ವಜಾ ಮಾಡಿದೆ. ಗಾಯಗೊಂಡಿರುವ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...