alex Certify
ಕನ್ನಡ ದುನಿಯಾ       Mobile App
       

Kannada Duniya

ಬಯಲಾಯ್ತು ಉಪನ್ಯಾಸಕಿಯ ಕರ್ಮಕಾಂಡ

ತಮಿಳುನಾಡಿನ ಖಾಸಗಿ ಕಾಲೇಜಿನ ಉಪನ್ಯಾಸಕಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಿಕ್ಷಕಿ ಹೆಚ್ಚು ನಂಬರ್ ಬೇಕೆಂದ್ರೆ ಅಧಿಕಾರಿಗಳ ಜೊತೆ ಅಡ್ಜೆಸ್ಟ್ ಆಗಿ ಎಂದು ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದ್ದಳು ಎನ್ನಲಾಗಿದೆ. ಹಣ ಇಲ್ಲವೆ ಶಾರೀರಿಕ ಸಂಬಂಧ ಬೆಳೆಸಿ ಎಂದು ಉಪನ್ಯಾಸಕಿ ವಿದ್ಯಾರ್ಥಿಗಳಿಗೆ ಸಲಹೆ ನೀಡುತ್ತಿದ್ದಳಂತೆ.

ತಮಿಳುನಾಡಿನ ಅರುಪುಕೊಟೈನ ದೇವಾಂಗ್ ಆರ್ಟ್ ಕಾಲೇಜಿನಲ್ಲಿ ಘಟನೆ ನಡೆದಿದೆ. ಒಂದು ತಿಂಗಳ ಹಿಂದೆ ಉಪನ್ಯಾಸಕಿ ಈ ರೀತಿ ಹೇಳಿಕೆ ನೀಡಿದ್ದಳು. ಭಾನುವಾರ ಉಪನ್ಯಾಸಕಿ ಹಾಗೂ ವಿದ್ಯಾರ್ಥಿಗಳ ನಡುವೆ ನಡೆದ ಮಾತುಕತೆ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಡಿಯೋ ವೈರಲ್ ಆದ ನಂತ್ರ ಪ್ರಕರಣ ದಾಖಲಾಗಿದೆ.

ಆಡಿಯೋದಲ್ಲಿ ಶೇಕಡಾ 85ರಷ್ಟು ಅಂಕ ಹಾಗೂ ವಿದ್ಯಾರ್ಥಿ ವೇತನಕ್ಕಾಗಿ ವಿದ್ಯಾರ್ಥಿನಿಯರು ಅಧಿಕಾರಿಗಳ ಜೊತೆ ಅಡ್ಜೆಸ್ಟ್ ಆಗಬೇಕೆಂದು ಶಿಕ್ಷಕಿ ಸಲಹೆ ನೀಡಿದ್ದಾಳೆ. ಕಾಲೇಜು ಹಾಗೂ ಮಹಿಳಾ ಸಂಘಟನೆ ದೂರಿನ ಮೇಲೆ ಸೋಮವಾರ ಸಂಜೆ ಮಹಿಳಾ ಉಪನ್ಯಾಸಕಿಯನ್ನು ಬಂಧಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಯಲಿದೆ. ಆರೋಪಿಗೆ ಕಠಿಣ ಶಿಕ್ಷೆಯಾಗಲಿದೆ ಎಂದು ಸರ್ಕಾರ ಭರವಸೆ ನೀಡಿದೆ. ಶಾರೀರಿಕ ಸಂಬಂಧ ಬೆಳೆಸುವಂತೆ ವಿದ್ಯಾರ್ಥಿಗಳಿಗೆ ನಾನು ಸಲಹೆ ನೀಡಿಲ್ಲ. ನನ್ನ ಹೇಳಿಕೆ ಉದ್ದೇಶ ಬೇರೆಯಾಗಿತ್ತು ಎಂದು ಉಪನ್ಯಾಸಕಿ ಹೇಳಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...