alex Certify
ಕನ್ನಡ ದುನಿಯಾ       Mobile App
       

Kannada Duniya

ಸುಪ್ರೀಂ ಜಡ್ಜ್ ಸುದ್ದಿಗೋಷ್ಠಿ ನಂತ್ರ ಸಭೆ ಕರೆದ ಪಿಎಂ : ಷೇರು ಮಾರುಕಟ್ಟೆಯಲ್ಲೂ ತಲ್ಲಣ

ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿ ಸುಪ್ರೀಂ ಕೋರ್ಟ್ ನ ನಾಲ್ವರು ನ್ಯಾಯಾಧೀಶರು ಮಾಧ್ಯಮಗಳ ಮುಂದೆ ಬಂದಿದ್ದಾರೆ. ಇದು ಸರ್ಕಾರವನ್ನು ತಲ್ಲಣಗೊಳಿಸಿದೆ. ನ್ಯಾಯಾಧೀಶರು ಸುದ್ದಿಗೋಷ್ಠಿ ನಡೆಸಿದ ಕೆಲವೇ ಕ್ಷಣಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾನೂನು ಸಚಿವ ರವಿ ಶಂಕರ್ ಪ್ರಸಾದ್ ಹಾಗೂ ರಾಜ್ಯ ಸಚಿವ ಪಿ.ಪಿ. ಚೌಧರಿಗೆ ಬುಲಾವ್ ನೀಡಿದ್ದಾರೆ.

ಈ ವಿಷ್ಯದಲ್ಲಿ ವಿಳಂಬ ಮಾಡುವುದು ಸರಿಯಲ್ಲ ಎಂಬ ಕಾರಣಕ್ಕೆ ಪ್ರಧಾನಿ ಕಾನೂನು ಸಚಿವರ ಸಭೆ ಕರೆದಿದ್ದಾರೆ. ಸಭೆಯಲ್ಲಿ ಪ್ರಧಾನ ಮಂತ್ರಿ ಅಗತ್ಯ ಮಾರ್ಗಸೂಚಿಗಳನ್ನು ನೀಡಬಹುದು ಎನ್ನಲಾಗ್ತಿದೆ. ಇಂದು ನಾಲ್ವರು ನ್ಯಾಯಾಧೀಶರು ಸುದ್ಧಿಗೋಷ್ಠಿ ನಡೆಸಿ ನ್ಯಾಯಾಂಗ ವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನ್ಯಾಯಾಧೀಶರ ಸುದ್ದಿಗೋಷ್ಠಿ ಷೇರು ಮಾರುಕಟ್ಟೆ ಮೇಲೂ ಪ್ರಭಾವ ಬೀರಿದೆ. ವಾರಾಂತ್ಯದ ಆರಂಭದಲ್ಲಿ ದಾಖಲೆ ಏರಿಕೆ ಕಂಡಿದ್ದ ಷೇರುಗಳ ಬೆಲೆ ಮಾಧ್ಯಮಗಳ ಮುಂದೆ ನ್ಯಾಯಾಧೀಶರು ಬರ್ತಿದ್ದಂತೆ ಪಾತಾಳಕ್ಕಿಳಿದಿದೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...