alex Certify
ಕನ್ನಡ ದುನಿಯಾ       Mobile App
       

Kannada Duniya

`ವಿಚ್ಛೇದನದ ನಂತ್ರ ಪತ್ನಿಗೆ ಸಿಗಬೇಕು ಆಸ್ತಿಯ ಅರ್ಧ ಭಾಗ’

ಭಾರತದಲ್ಲಿ ಹುಡುಗಿಯರಿಗೆ ಮದುವೆ ವಯಸ್ಸು 18 ಹಾಗೂ ಹುಡುಗ್ರಿಗೆ ಮದುವೆ ವಯಸ್ಸು 21 ವರ್ಷ. ಕಾನೂನು ಆಯೋಗ ಇದ್ರಲ್ಲಿ ಬದಲಾವಣೆ ತರಲು ಶಿಫಾರಸ್ಸು ಮಾಡಿದೆ. ಹುಡುಗ್ರ ಮದುವೆ ವಯಸ್ಸನ್ನು 21 ರ ಬದಲು 18ಕ್ಕಿಳಿಸುವಂತೆ ಶಿಫಾರಸ್ಸು ಮಾಡಿದೆ.

18 ವರ್ಷದ ಹುಡುಗ್ರಿಗೆ ಮತದಾನ ಮಾಡುವ ಹಕ್ಕಿದೆ ಎಂದಾದ್ರೆ ಮದುವೆಯಾಗಿ ಸಂಸಾರ ಮಾಡಲು ಅವ್ರು ಅರ್ಹರಾಗಿರುತ್ತಾರೆಂದು ಆಯೋಗ ಹೇಳಿದೆ. ಗಂಡು-ಹೆಣ್ಣಿನ ಮಧ್ಯೆ ವಯಸ್ಸಿನ ಅಂತರವಿರಬೇಕೆಂಬುದಕ್ಕೆ ಕಾನೂನಿನಲ್ಲಿ ಜಾಗವಿಲ್ಲ. ಇಲ್ಲಿ ಎಲ್ಲರೂ ಸಮಾನರು ಎಂದು ಆಯೋಗ ಅಭಿಪ್ರಾಯಪಟ್ಟಿದೆ. ಪತಿಗಿಂತ ಪತ್ನಿ ಚಿಕ್ಕವಳಿರಬೇಕೆಂಬ ನಿಯಮವಿಲ್ಲ. ಹಾಗಾಗಿ ಇಬ್ಬರ ಮದುವೆ ವಯಸ್ಸನ್ನು 18 ವರ್ಷ ಮಾಡಬೇಕೆಂದು ಅದು ಹೇಳಿದೆ.

ಇಷ್ಟೇ ಅಲ್ಲ ಮದುವೆ ನಂತ್ರ ಪತಿ ಆಸ್ತಿಯಲ್ಲಿ ಪತ್ನಿಗೆ ಸಮಪಾಲಿದೆಯಂತೆ. ವಿಚ್ಛೇದನದ ನಂತ್ರ ಪತ್ನಿಗೆ ಸಮಪಾಲು ಸಿಗಬೇಕೆಂದು ಕಾನೂನು ಆಯೋಗ ಸಲಹೆ ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...