alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಧಾನಿ ಮೋದಿ ಹತ್ಯೆಗೆ ಲಷ್ಕರ್ ಸಂಚು

ಭಯೋತ್ಪಾದನಾ ಸಂಘಟನೆ ಲಷ್ಕರ್ ಎ ತೋಯ್ಬಾ ದೊಡ್ಡದೊಂದು ಪ್ಲಾನ್ ಮಾಡ್ತಿದೆ. ಗುಪ್ತಚರ ವರದಿ ಪ್ರಕಾರ ಲಷ್ಕರ್ ಎ ತೋಯ್ಬಾ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹತ್ಯೆಗೆ ಸಂಚು ರೂಪಿಸುತ್ತಿದೆ. ಭಯೋತ್ಪಾದಕ ಹಫೀಜ್ ಸಯೀದ್ ಯೋಜನೆ ರೂಪಿಸುತ್ತಿದ್ದಾನೆನ್ನಲಾಗಿದೆ.

ಗುಪ್ತಚರ ಇಲಾಖೆ ವರದಿ ಪ್ರಕಾರ, ಪಾಕಿಸ್ತಾನದ ಭಯೋತ್ಪಾದಕ ಹಫೀಜ್ ಸಹೀದ್ ಇದಕ್ಕಾಗಿ ಎಲ್ಲ ಪ್ಲಾನ್ ಮಾಡಿದ್ದಾನಂತೆ. ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಸಂಪೂರ್ಣ ಬೆಂಬಲ ಇದಕ್ಕಿದೆ ಎನ್ನಲಾಗಿದೆ.

ಈ ಹಿಂದೆ ಕೂಡ ಲಂಡನ್ ನಲ್ಲಿರುವ ಕೆಲ ಭಯೋತ್ಪಾದಕರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹತ್ಯೆಗೆ ಸಂಚು ರೂಪಿಸಿದ್ದಾರೆ ಎನ್ನಲಾಗಿತ್ತು. ವರದಿ ಹಿನ್ನೆಲೆಯಲ್ಲಿ ಇಬ್ಬರ ಭದ್ರತೆಯನ್ನು ಬಿಗಿಗೊಳಿಸಲಾಗಿತ್ತು.

ಮುಂಬೈ ದಾಳಿ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಪಾಕಿಸ್ತಾನದ ಜೈಲಿನಲ್ಲಿದ್ದಾನೆ. ಜನವರಿ 31ರಂದು ಆತನನ್ನು ಬಂಧಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...