alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ಮುಂದೆ ವಿಮಾನದಲ್ಲಿ ಬ್ಯಾನ್ ಆಗಬಹುದು ಲ್ಯಾಪ್ ಟಾಪ್

ವಿಮಾನದಲ್ಲಿ ಪ್ರಯಾಣ ಮಾಡುವ ವೇಳೆ ಇನ್ಮುಂದೆ ನಿಮ್ಮ ಜೊತೆ ಲ್ಯಾಪ್ ಟಾಪ್ ಕೊಂಡೊಯ್ಯುವಂತಿಲ್ಲ.ಅಂತರಾಷ್ಟ್ರೀಯ ಸಿವಿಲ್ ಏವಿಯೇಷನ್ ಆರ್ಗನೈಸೇಶನ್ ನ ವಾಯು ಸುರಕ್ಷತಾ ಸಮಿತಿ ಈ ಬಗ್ಗೆ ಪ್ರಸ್ತಾವನೆ ನೀಡಿದೆ. ಈ ಪ್ರಸ್ತಾವನೆಗೆ ಒಪ್ಪಿಗೆ ಸಿಕ್ಕಲ್ಲಿ ಚೆಕ್ ಇನ್ ಲಗೇಜ್ ನಲ್ಲಿ ಲ್ಯಾಪ್ ಟಾಪ್ ತೆಗೆದುಕೊಂಡು ಹೋಗುವಂತಿಲ್ಲ.

ವಿಮಾನದಲ್ಲಿ ತೆಗೆದುಕೊಂಡು ಹೋಗುವ ಸಾಮಾಗ್ರಿಗೆ ಬೆಂಕಿ ತಗಲುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಈ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಳೆದ ವಾರ ದೆಹಲಿ-ಇಂದೋರ್ ವಿಮಾನದಲ್ಲಿ ಮೊಬೈಲ್ ಸ್ಫೋಟಗೊಂಡು ಭಯಕ್ಕೆ ಕಾರಣವಾಗಿತ್ತು. ಈ ಪರಿಸ್ಥಿತಿಯನ್ನು ನಿಭಾಯಿಸಲು ವಿಮಾನದ ಸಿಬ್ಬಂದಿ ಸಿದ್ಧರಿಲ್ಲ. ಸಿಬ್ಬಂದಿಗೆ ತರಬೇತಿ ನೀಡಲಾಗ್ತಿದೆ. ಜೊತೆಗೆ ಬೆಂಕಿ ತಗಲುವ ವಸ್ತುವನ್ನು ಚೆಕ್ ಇನ್ ಲಗೇಜ್ ನಲ್ಲಿ ತೆಗೆದುಕೊಂಡು ಹೋಗುವುದಕ್ಕೆ ಅನುಮತಿ ನೀಡಬಾರದೆಂದು ಪ್ರಸ್ತಾವನೆಯಲ್ಲಿ ಹೇಳಲಾಗಿದೆ.

ಭಾರತದ ಡಿಜಿಸಿಎ ಈಗಾಗ್ಲೇ ಚೆಕ್ ಇನ್ ಬ್ಯಾಗ್ ನಲ್ಲಿ ಪವರ್ ಬ್ಯಾಂಕ್, ಪೋರ್ಟಬಲ್ ಮೊಬೈಲ್ ಚಾರ್ಜರ್ ಹಾಗೂ ಇ-ಸಿಗರೇಟನ್ನು ನಿಷೇಧಿಸಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...