alex Certify
ಕನ್ನಡ ದುನಿಯಾ       Mobile App
       

Kannada Duniya

ಮೊಬೈಲ್ ಟವರ್ ಏರಿದ್ದ ಮಂಗ ಮೂರು ದಿನಗಳ ನಂತರ ರಕ್ಷಣೆ

ಬೇಡಿಕೆಗಳನ್ನ ಈಡೇರಿಸಿ ಅಂತ ಜನರು ಮೊಬೈಲ್ ಟವರ್ ಏರಿ ಪ್ರತಿಭಟನೆ ನಡೆಸೋದು ಕಾಮನ್. ಆದ್ರೆ ಆಗ್ರಾದ ಕಾಡಿಯಾದಲ್ಲಿ ಲಂಗೂರ್ ತಳಿಯ ಕೋತಿಯೊಂದು ಮೊಬೈಲ್ ಟವರ್ ಏರಿ ಅಲ್ಲಿಂದ ಕೆಳಗಿಳಿಯಲಾರದೆ ಒದ್ದಾಡಿದ ಘಟನೆ ನಡೆದಿದೆ. ಆನಂತರದಲ್ಲಿ ಗ್ರಾಮಸ್ಥರು ಮತ್ತು ಅರಣ್ಯಾಧಿಕಾರಿಗಳ ಸಹಾಯದಿಂದ ಮೂರು ದಿನಗಳ ಬಳಿಕ ಕೋತಿಯನ್ನು ರಕ್ಷಿಸಲಾಗಿದೆ.

160 ಅಡಿ ಎತ್ತರವಿದ್ದ ಮೊಬೈಲ್ ಟವರನ್ನು ಮೂರು ದಿನಗಳ ಹಿಂದೆ ಆಕಸ್ಮಿಕವಾಗಿ ಕೋತಿಯೊಂದು ಏರಿದೆ. ಟವರ್ ನಲ್ಲಿದ್ದ ವೈರ್ ಮತ್ತು ಉಕ್ಕಿನ ಬಾರ್ ನ ನಡುವೆ ಕೋತಿಯ ಕತ್ತು ಸಿಲುಕಿ, ಅದನ್ನ ಬಿಡಿಸಿಕೊಳ್ಳಲಾರದೆ ಕೋತಿ ಪರಿತಪಿಸಿದೆ. ಮೂರು ದಿನಗಳ ಕಾಲ ಕೋತಿ ಮೊಬೈಲ್ ಟವರ್ ನಲ್ಲಿ ಕುಳಿತ ಸ್ಥಿತಿಯನ್ನ ಬದಲಿಸಿಯೂ ಇಲ್ಲ,

ಮೊದಲು ಇದನ್ನ ಜನರು ಮಂಗನಾಟ ಅಂದುಕೊಂಡು ಸುಮ್ಮನಾಗಿದ್ದರು. ಆನಂತರದಲ್ಲಿ ಇತರೆ ಕೋತಿಗಳು ತಮ್ಮ ಸಹವರ್ತಿಗೆ ಬಂದಿರುವ ಸ್ಥಿತಿಯನ್ನು ನೋಡಿ ಮರುಗಲು ಶುರುಮಾಡಿವೆ. ಹಾಗಾಗಿ ಜನರು ಕೋತಿಯ ಸ್ಥಿತಿಯನ್ನು ಅರ್ಥ ಮಾಡಿಕೊಂಡು ಅರಣ್ಯಾಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದಾರೆ.

ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಮೊಬೈಲ್ ಟವರ್ ಏರಿ ಲಂಗೂರ್ ಕೋತಿಯ ರಕ್ಷಣೆ ಮಾಡಿದ್ದಾರೆ. ಕೋತಿಯನ್ನು ರಕ್ಷಣೆ ಮಾಡೋದಕ್ಕೆ ಅರಣ್ಯ ಸಿಬ್ಬಂದಿ ಎರಡು ಗಂಟೆಗಳ ಕಾಲ ಮೊಬೈಲ್ ಟವರ್ ಏರಬೇಕಾಯ್ತು. ಕೋತಿಯ ರಕ್ಷಣಾ ಕಾರ್ಯಕ್ಕೂ ಮುನ್ನ ಮೂರರಿಂದ ನಾಲ್ಕು ಗಂಟೆಗಳ ಕಾಲ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲಾಗಿತ್ತು. ಮೂರು ದಿನಗಳಿಂದ ಸಾಕಷ್ಟು ಬಳಲಿದ್ದ ಕೋತಿಯನ್ನ ರಕ್ಷಣಾ ಸಿಬ್ಬಂದಿ ಆರೈಕೆ ಮಾಡಿ ನಂತರದಲ್ಲಿ ಸ್ಥಳೀಯ ಕಾಡಿಗೆ ಬಿಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...