alex Certify
ಕನ್ನಡ ದುನಿಯಾ       Mobile App
       

Kannada Duniya

ಮಗನಿಂದಾಗಿ ನಿದ್ರೆ ಬಿಟ್ಟ ಲಾಲು: ಹದಗೆಡುತ್ತಿದೆ ಆರೋಗ್ಯ

ಬಹುಕೋಟಿ ಮೇವು ಹಗರಣದಲ್ಲಿ ಜೈಲು ಸೇರಿರುವ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ತಲೆನೋವು ಹೆಚ್ಚಾಗಿದೆ. ಅನಾರೋಗ್ಯ ಹಿನ್ನೆಲೆಯಲ್ಲಿ ಲಾಲು ಪ್ರಸಾದ್ ಯಾದವ್ ರಾಂಚಿಯ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಟುಂಬದ ಗಲಾಟೆ ಲಾಲು ಆರೋಗ್ಯದ ಮೇಲೆ ಮತ್ತಷ್ಟು ಪ್ರಭಾವ ಬೀರಿದೆ.

ತೀವ್ರ ಒತ್ತಡಕ್ಕೊಳಗಾಗಿರುವ ಲಾಲು ಪ್ರಸಾದ್ ಯಾದವ್ ಆಸ್ಪತ್ರೆಯಲ್ಲಿ ಸರಿಯಾಗಿ ನಿದ್ರೆ ಮಾಡುತ್ತಿಲ್ಲವಂತೆ. ಅವ್ರ ಕಿಡ್ನಿ ಭಾಗಶಃ 50ರಷ್ಟು ಮಾತ್ರ ಕೆಲಸ ಮಾಡ್ತಿದೆಯಂತೆ. ಅವ್ರ ಆರೋಗ್ಯ ಇನ್ನಷ್ಟು ಹದಗೆಡುವ ಸಾಧ್ಯತೆಯಿದೆ ಎಂದು ವೈದ್ಯರು ಹೇಳಿದ್ದಾರೆ. ಲಾಲು ಪ್ರಸಾದ್ ಯಾದವ್ 14-15 ರೀತಿಯ ರೋಗದಿಂದ ಬಳಲುತ್ತಿದ್ದಾರೆ. ಮನೆಯಲ್ಲಿ ನಡೆಯುತ್ತಿರುವ ತೇಜ್ ಪ್ರತಾಪ್ ಯಾದವ್-ಐಶ್ವರ್ಯ ವಿಚ್ಛೇದನ ಗಲಾಟೆಯಿಂದ ಅವ್ರು ನಿದ್ರೆ ಕಳೆದುಕೊಂಡಿದ್ದಾರಂತೆ. ಅಪೂರ್ಣ ನಿದ್ರೆ ಅವ್ರ ಆರೋಗ್ಯದ ಮೇಲೆ ಪ್ರಭಾವ ಬೀರುತ್ತಿದೆಯಂತೆ.

ರಿಮ್ಸ್ ನಲ್ಲಿ ಲಾಲು ಪ್ರಸಾದ್ ರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಲಾಲು ಆರೋಗ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಲಾಲು 24 ಗಂಟೆಯಲ್ಲಿ 6 ಗಂಟೆ ಮಾತ್ರ ನಿದ್ರೆ ಮಾಡ್ತಿದ್ದು, ತಲೆ ಸುತ್ತು ಬರ್ತಿದೆ. ನಿದ್ರೆ ಮಾಡಿ ಎದ್ದ ತಕ್ಷಣ ನಿಲ್ಲದಂತೆ ಸಲಹೆ ನೀಡಿದ್ದೇವೆ ಎಂದಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...