alex Certify
ಕನ್ನಡ ದುನಿಯಾ       Mobile App
       

Kannada Duniya

ಸುಸಂಸ್ಕೃತ ಸೊಸೆಯ ಹುಡುಕಾಟದಲ್ಲಿದ್ದಾರೆ ಲಾಲು-ರಾಬ್ರಿ ದಂಪತಿ

602101-lalu-family

ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಮತ್ತವರ ಪತ್ನಿ ರಾಬ್ರಿ ದೇವಿ ತಮ್ಮ ಹಿರಿಯ ಮಗನಿಗೆ ಮದುವೆ ಮಾಡಲು ತುದಿಗಾಲ್ಲಿ ನಿಂತಿದ್ದಾರೆ. ಆದ್ರೆ ಲಾಲು ಕುಟುಂಬಕ್ಕೆ ಮಾಡರ್ನ್ ಸೊಸೆ ಬೇಡವಂತೆ. ಸಂಸ್ಕಾರವಂತ ಸೊಸೆ ಬೇಕು ಅಂತಾ ಇಬ್ಬರೂ ಹೇಳ್ತಿದ್ದಾರೆ.

ಲಾಲೂ ಪ್ರಸಾದ್ ಯಾದವ್ ರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಗೆ ಈಗ 28 ವರ್ಷ. ಮದುವೆ ವಯಸ್ಸಿಗೆ ಬಂದಿರೋ ಮಗನಿಗೆ ಆದಷ್ಟು ಬೇಗ ಹುಡುಗಿ ಹುಡುಕಬೇಕು ಅನ್ನೋದು ಹೆತ್ತವರ ಆಸೆ. ಸಿನೆಮಾ, ಮಾಲ್ ಗೆ ಹೋಗುವ ಸೊಸೆ ತಮಗೆ ಬೇಡ, ಸುಸಂಸ್ಕೃತ ಹಳ್ಳಿ ಹುಡುಗಿಯಾದ್ರೆ ಚೆನ್ನ ಎನ್ನುತ್ತಿದ್ದಾರೆ ರಾಬ್ರಿ ದೇವಿ.

ಧಾರ್ಮಿಕ ಭಾವನೆಗಳುಳ್ಳ ದೇಸಿ ಬಹುವಿಗಾಗಿ ತಲಾಶ್ ನಡೆದಿದೆ. ಹೆಣ್ಣಿನ ಕಡೆಯವರಿಂದ ಲಾಲೂ ನಯಾಪೈಸೆ ವರದಕ್ಷಿಣೆ ಪಡೆಯೋದಿಲ್ವಂತೆ. ತೇಜ್ ಪ್ರತಾಪ್ ಯಾದವ್ ಸದ್ಯ ಬಿಹಾರದ ಆರೋಗ್ಯ ಮತ್ತು ಅರಣ್ಯ ಸಚಿವರಾಗಿ ಕೆಲಸ ಮಾಡ್ತಿದ್ದಾರೆ. ತಂದೆಯಂತೆ ತೇಜ್ ಪ್ರತಾಪ್ ಕೂಡ ಹಗರಣಗಳಲ್ಲಿ ಸಿಲುಕಿದ್ದಾರೆ.

ಈಗಾಗ್ಲೇ ತೇಜ್ ಪ್ರತಾಪ್ ಗೆ ಸಾಕಷ್ಟು ಪ್ರಪೋಸಲ್ಸ್ ಬಂದಿದೆಯಂತೆ. ಆದ್ರೆ ಲಾಲು ಹಾಗೂ ರಾಬ್ರಿಗೆ ಯಾವುದೂ ಒಪ್ಪಿಗೆಯಾಗಿಲ್ಲ. ಲಾಲೂ ಹಾಗೂ ರಾಬ್ರಿ ದಂಪತಿಗೆ 7 ಹೆಣ್ಣು ಹಾಗೂ ಇಬ್ಬರು ಗಂಡು ಮಕ್ಕಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...