alex Certify
ಕನ್ನಡ ದುನಿಯಾ       Mobile App
       

Kannada Duniya

ನೋಟು ನಿಷೇಧ ವಿರೋಧಿಸಿ ಲಾಲು ರ್ಯಾಲಿ

lalu

ಆರ್ ಜೆ ಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ನೋಟು ನಿಷೇಧದ ವಿರುದ್ಧ ಗುಡುಗಿದ್ದಾರೆ. ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡಿದ ಲಾಲು ಪ್ರಸಾದ್, ನೋಟು ನಿಷೇಧದ ವಿರುದ್ಧ ಪಾಟ್ನಾದಲ್ಲಿ ಬೃಹತ್ ರ್ಯಾಲಿ ನಡೆಸುವುದಾಗಿ ಹೇಳಿದ್ದಾರೆ.

ದೆಹಲಿಯಲ್ಲಿ ನೋಟು ನಿಷೇಧದ ವಿರುದ್ಧ ಚಳುವಳಿಗಿಳಿದಿರುವ ಪಕ್ಷಗಳ ಜೊತೆಯೂ ಈ ಬಗ್ಗೆ ಮಾತುಕತೆ ನಡೆಸುವುದಾಗಿ ಲಾಲು ತಿಳಿಸಿದ್ದಾರೆ. ನೋಟು ನಿಷೇಧದಿಂದ ಕಪ್ಪುಹಣ ಹೊರಗೆ ಬರಲು ಸಾಧ್ಯವಿಲ್ಲ. ನೋಟು ನಿಷೇಧ ಯೋಜನೆ ವಿಫಲವಾಗಿದೆ.

ಇದ್ರಿಂದ ಕಪ್ಪುಹಣ ಹೊರಗೆ ಬರಲಿಲ್ಲ. ನೋಟು ನಿಷೇಧದ ನಂತ್ರ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪ್ರಧಾನ ಮಂತ್ರಿ 50 ದಿನಗಳ ಕಾಲಾವಕಾಶ ಕೇಳಿದ್ದಾರೆ. ಅದ್ರಲ್ಲಿ 40 ದಿನ ಈಗಾಗಲೇ ಕಳೆದಿದೆ. ನಾನು ನೋಟು ನಿಷೇಧದ ಲಾಭ ಹಾಗೂ ನಷ್ಟದ ಬಗ್ಗೆ ಅರ್ಥಶಾಸ್ತ್ರಜ್ಞರ ಜೊತೆ ಮಾತನಾಡುತ್ತೇನೆ. ನಂತ್ರ ಆರ್ ಜೆ ಡಿ ಹಾಗೂ ಜೆಡಿಯು ಒಂದಾಗಿ ಹೋರಾಟ ನಡೆಸುತ್ತೇವೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...