alex Certify
ಕನ್ನಡ ದುನಿಯಾ       Mobile App
       

Kannada Duniya

ಮೊದಲ ದಿನ ತೋಟಗಾರಿಕೆಯಿಂದ ಲಾಲು ಗಳಿಸಿದ್ರು ಇಷ್ಟು ಹಣ

ಸಿಎಂ ಆಗಿದ್ದ ಸಮಯದಲ್ಲಿ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ತೋಟಗಾರಿಕೆ ಹಾಗೂ ಪಶುಸಂಗೋಪನೆ ವಿಷ್ಯ ಸುದ್ದಿಯಲ್ಲಿತ್ತು. ಈಗ ಲಾಲು ಪ್ರಸಾದ್ ಯಾದವ್ ರಾಂಚಿಯ ಜೈಲು ಸೇರಿದ್ದಾರೆ. ಬಹುಕೋಟಿ ಮೇವು ಹಗರಣದಲ್ಲಿ ಜೈಲು ಸೇರಿರುವ ಲಾಲು ಪ್ರಸಾದ್ ಯಾದವ್ ಜೈಲಿನಲ್ಲಿ ತಮ್ಮ ಕೆಲಸ ಶುರುಮಾಡಿದ್ದಾರೆ.

ಗುರುವಾರ ಜೈಲಧಿಕಾರಿ ಸೂಚನೆ ಮೇರೆಗೆ ವಿಐಪಿ ಸೆಲ್ ನಿಂದ ಹೊರ ಬಂದ ಲಾಲು ಪ್ರಸಾದ್ ಯಾದವ್ ಜೈಲಿನಲ್ಲಿ ತೋಟಗಾರಿಕೆ ಕೆಲಸ ಮಾಡಿದ್ದಾರೆ. ಜೈಲಿನ ಕೈಪಿಡಿ ಪ್ರಕಾರ ಲಾಲು ಪ್ರಸಾದ್ ಗೆ ಕೆಲಸ ಮಾಡಿದ ಕೂಲಿ ಸಿಗಲಿದೆ. ದಿನಕ್ಕೆ 91 ರೂಪಾಯಿಯನ್ನು ಲಾಲು ಗಳಿಸಲಿದ್ದಾರೆ. ಗುರುವಾರದಿಂದ ಜೈಲಿನಲ್ಲಿ ಗಳಿಕೆ ಶುರು ಮಾಡಿರುವ ಲಾಲು ಮೊದಲ ದಿನ 91 ರೂಪಾಯಿ ಗಳಿಸಿದ್ದಾರೆ. ಈ ಪ್ರಕ್ರಿಯೆ ಮೂರುವರೆ ವರ್ಷ ಮುಂದುವರೆಯಲಿದೆ.

ಮೊದಲ ದಿನ ಜೈಲಿನಲ್ಲಿ ಹಾಕಿರುವ ಗಿಡಗಳ ಬಗ್ಗೆ ಲಾಲು ಮಾತನಾಡಿದ್ದಾರೆ. ಜೈಲಿನಲ್ಲಿ ತರಕಾರಿ ಬೆಳೆಯುವ ಬಗ್ಗೆಯೂ ಲಾಲು ಚರ್ಚೆ ನಡೆಸಿದ್ದಾರೆ. ಯಾವ ಋತುವಿನಲ್ಲಿ ಯಾವ ಬೆಳೆ ಬೆಳೆಯಬೇಕು, ತೋಟದಲ್ಲಿ ಹೇಗೆ ಕೆಲಸ ನಡೆಯುತ್ತದೆ ಎಂಬೆಲ್ಲದರ ಬಗ್ಗೆ ತಮ್ಮ ಅನುಭವ ಹಂಚಿಕೊಂಡ್ರು. ಆರ್.ಕೆ. ರಾಣಾ ಲಾಲು ಪ್ರಸಾದ್ ಯಾದವ್ ಜೊತೆ ತೋಟಗಾರಿಕೆ ಕೆಲಸದಲ್ಲಿ ಕೈ ಜೋಡಿಸಿದ್ರು.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...