alex Certify
ಕನ್ನಡ ದುನಿಯಾ       Mobile App
       

Kannada Duniya

ಬಂದೂಕು ತೋರಿಸಿ ಲಾಲು ಪ್ರಸಾದ್ ಯಾದವ್ ಅವರ ಅಳಿಯನ ಕಾರು ಅಪಹರಣ

lalu-prasad_650x400_71446403770

ಬಿಹಾರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಮಾತು ಕೇಳಿ ಬರುತ್ತಿರುವ ನಡುವೆಯೇ ಆರ್ ​ಜೆ ಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಅಳಿಯ ವಿನಿತ್ ಯಾದವ್ ಅವರ ಕಾರನ್ನು ಅಪಹರಿಸಿರುವ ಘಟನೆ ನಡೆದಿದೆ.

ಗುಡವಾವ್ ​ನ ಸಿಕಂದರ್ ​ಪುರ್ ಮೆಟ್ರೋ ರೈಲ್ವೆ ಸ್ಟೇಷನ್ ಬಳಿ ವಿನಿತ್ ಯಾದವ್ ಅವರ ಟೊಯೋಟಾ ಫಾರ್ಚುನರ್ ಕಾರನ್ನು ಅಪರಿಚಿತರು ಬಂದೂಕು ತೋರಿಸಿ ಬೆದರಿಸಿ ಅಪಹರಿಸಿದ್ದಾರೆ ಎನ್ನಲಾಗಿದ್ದು, ಸಿಕಂದರ್​ ಪುರ್ ಮೆಟ್ರೋ ಸ್ಟೇಷನ್ ಬಳಿ ವಿನಿತ್ ಅವರ ಕಾರನ್ನು ಅಡ್ಡಗಟ್ಟಿರುವ ದುಷ್ಕರ್ವಿುಗಳು ಕಾರಿನ ಚಾಲಕನಿ​ಗೆ ಬಂದೂಕು ತೋರಿಸಿ ಬೆದರಿಸಿ ಕಾರು ಕಳ್ಳತನ ಮಾಡಿದ್ದಾರೆ.

ಅದೃಷ್ಟವಶಾತ್ ಕಾರು ಕಳುವಾದ ಸಮಯದಲ್ಲಿ ವಿನಿತ್ ಕಾರಿನಲ್ಲಿರಲಿಲ್ಲ ಎನ್ನಲಾಗಿದ್ದು, ಈಗಾಗಲೇ ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...