alex Certify
ಕನ್ನಡ ದುನಿಯಾ       Mobile App
       

Kannada Duniya

10,000 ರೂ. ಪಿಂಚಣಿ ಪಡೆಯುತ್ತಾರೆ ಈ ರಾಜಕಾರಣಿ

lalu

ಆರ್ ಜೆ ಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಗೆ ಇನ್ಮೇಲೆ ಪ್ರತಿ ತಿಂಗಳು 10,000 ರೂಪಾಯಿ ಪಿಂಚಣಿ ಬರಲಿದೆ. ಜೆಪಿ ಸೇನಾನಿ ಸಮ್ಮಾನ್ ಪೆನ್ಷನ್ ಯೋಜನೆಯಡಿ ಹಣ ಪಡೆಯಲು ಲಾಲೂ ಅರ್ಹರು ಅಂತಾ ಪ್ರಕಟಿಸಲಾಗಿದೆ. ಪ್ರತಿ ತಿಂಗಳು 10,000 ರೂಪಾಯಿ ಪಿಂಚಣಿಗಾಗಿ ಲಾಲೂ ಗೃಹ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು.

1974ರಲ್ಲಿ ಜಯಪ್ರಕಾಶ್ ನಾರಾಯಣ್ ಅವರು ‘ಸಂಪೂರ್ಣ ಕ್ರಾಂತಿ’ ಚಳವಳಿ ಆರಂಭಿಸಿದಾಗ ಲಾಲೂ ವಿದ್ಯಾರ್ಥಿ ಸಂಘಟನೆಯ ನಾಯಕರಾಗಿದ್ದರು. ಅಷ್ಟೇ ಅಲ್ಲ ಆ ಸಮಯದಲ್ಲಿ ಸೆರೆವಾಸವನ್ನು ಕೂಡ ಅನುಭವಿಸಿದ್ದಾರೆ.  2015ರಲ್ಲಿ ಜೆಪಿ ಸೇನಾನಿ ಸಮ್ಮಾನ್ ಪಿಂಚಣಿ ಯೋಜನೆ ಜಾರಿ ಮಾಡಲಾಗಿದ್ದು, ಲಾಲೂ ಅದರ ಫಲಾನುಭವಿಯೆಂದು ಪ್ರಕಟಿಸಲಾಗಿದೆ.

1-6 ತಿಂಗಳ ಜೈಲುವಾಸ ಅನುಭವಿಸಿದವರಿಗೆ ತಿಂಗಳಿಗೆ 5000 ರೂಪಾಯಿ, 6 ತಿಂಗಳಿಗಿಂತ ಹೆಚ್ಚು ಕಾಲ ಸೆರೆವಾಸ ಅನುಭವಿಸಿದವರಿಗೆ ಪ್ರತಿತಿಂಗಳು 10,000 ರೂಪಾಯಿ ಪಿಂಚಣಿ ನೀಡಲಾಗುತ್ತಿದೆ. ಈ ಯೋಜನೆಯಡಿ 3100 ಮಂದಿ ಪಿಂಚಣಿ ಪಡೆಯುತ್ತಿದ್ದಾರೆ. ಬಿಜೆಪಿ ಮುಖಂಡ ಸುಶೀಲ್ ಕುಮಾರ್ ಮೋದಿ, ನಿತೀಶ್ ಕುಮಾರ್ ಕೂಡ ಯೋಜನೆಯ ಫಲಾನುಭವಿಗಳಾಗಿದ್ದು ಹಣ ಪಡೆಯುತ್ತಿಲ್ಲ.

 

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...