alex Certify
ಕನ್ನಡ ದುನಿಯಾ       Mobile App
       

Kannada Duniya

ಲಾಲು ಪ್ರಸಾದ್ ಯಾದವ್ ಆರೋಗ್ಯದಲ್ಲಿ ಏರುಪೇರು

ರಾಂಚಿಯ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರ್.ಜೆ.ಡಿ. ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಆರೋಗ್ಯದಲ್ಲಿ ಏರುಪೇರಾಗಿದೆ. ಮಾಹಿತಿ ಪ್ರಕಾರ ಸೋಂಕಿನ ಜೊತೆ ಶುಗರ್ ಮಟ್ಟ ಹೆಚ್ಚಾಗಿದೆಯಂತೆ. ಲಾಲು ಆರೋಗ್ಯ ಹದಗೆಟ್ಟಿದ್ದು, ಟಿಸಿ 12100 ಇದೆ ಎಂದು ಮೂಲಗಳು ಹೇಳಿವೆ.

ಲಾಲು ಪ್ರಸಾದ್ ಯಾದವ್ ಪಾದಗಳು ಊದಿಕೊಂಡಿವೆ. ಇದು ಗಂಭೀರವೆಂದು ವೈದ್ಯರು ಹೇಳಿದ್ದಾರೆ. ಸಕ್ಕರೆ ಮಟ್ಟ 190 ದಾಟಿದೆಯಂತೆ. ಲಾಲು ಆರೋಗ್ಯ ಸ್ಥಿತಿ ನೋಡಿ ವೈದ್ಯರು ಎರಡು ರೀತಿಯ ಎಂಟಿಬಯೋಟಿಕ್ಸ್ ನೀಡ್ತಿದ್ದಾರೆ ಎನ್ನಲಾಗಿದೆ.

ಲಾಲು ಪ್ರಸಾದ್ ಯಾದವ್ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಿಡ್ನಿಯಲ್ಲಿ ಕಲ್ಲಿದೆ ಎಂಬ ಮಾಹಿತಿ ಕೂಡ ಸಿಕ್ಕಿದೆ. ಅಧಿಕ ರಕ್ತದೊತ್ತಡದ ವಿರುದ್ಧವೂ ಅವ್ರು ಹೋರಾಡುತ್ತಿದ್ದಾರೆ.

ಚಿಕಿತ್ಸೆ ನೀಡುತ್ತಿರುವ ವೈದ್ಯರ ಪ್ರಕಾರ ಲಾಲು ಪ್ರಸಾದ್ ಯಾದವ್ 10 ಕ್ಕೂ ಹೆಚ್ಚು ಖಾಯಿಲೆಯಿಂದ ಬಳಲುತ್ತಿದ್ದಾರಂತೆ. ಇದ್ರಿಂದ ಚಿಕಿತ್ಸೆ ನೀಡುವುದು ಕಷ್ಟವಾಗ್ತಿದೆ ಎಂದು ವೈದ್ಯರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...