alex Certify
ಕನ್ನಡ ದುನಿಯಾ       Mobile App
       

Kannada Duniya

ವೇದಿಕೆ ಕುಸಿದು ಗಾಯಗೊಂಡ ಲಾಲು ಪ್ರಸಾದ್ ಯಾದವ್

untitled1_e7cnqsi

ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅದೃಷ್ಟ ಶುಕ್ರವಾರ ಚೆನ್ನಾಗಿತ್ತು. ಕೂದಲೆಳೆಯಲ್ಲಿ ಅವರು ಬಚಾವ್ ಆಗಿದ್ದಾರೆ. ಪಾಟ್ನಾದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಲಾಲು ಪಾಲ್ಗೊಂಡಿದ್ದರು. ಲಾಲು ಕುಳಿತಿದ್ದ ವೇದಿಕೆ ಕುಸಿದಿದೆ. ಘಟನೆಯಲ್ಲಿ ಲಾಲು ಸೇರಿದಂತೆ ಅನೇಕ ನಾಯಕರಿಗೆ ಗಾಯಗಳಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ವೇದಿಕೆ ಮೇಲೆ ಬಂದ ಲಾಲು ಪ್ರಸಾದ್ ಯಾದವ್ ನೋಡಿದ ಅಭಿಮಾನಿಗಳು ಅವರ ಭೇಟಿಗೆ ಮುಗಿ ಬಿದ್ದಿದ್ದಾರೆ. ಒಮ್ಮೆಲೇ 100ಕ್ಕೂ ಹೆಚ್ಚು ಮಂದಿ ವೇದಿಕೆ ಹತ್ತಿದ್ದರಿಂದ ಭಾರ ತಡೆಯಲಾರದೆ ವೇದಿಕೆ ಕುಸಿದಿದೆ ಎಂದು ಮೂಲಗಳು ಹೇಳಿವೆ.

ಘಟನೆಯಲ್ಲಿ ಲಾಲು ಪ್ರಸಾದ್ ಸೊಂಟಕ್ಕೆ ಸಣ್ಣ ಗಾಯವಾಗಿದೆ. ಘಟನೆ ನಂತ್ರ ತಕ್ಷಣ ಲಾಲು ಪ್ರಸಾದ್ ಅವರನ್ನು ಇಂದಿರಾ ಗಾಂಧಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಗೆ ದಾಖಲಿಸಲಾಯ್ತು. ಎಕ್ಸರೆ ತೆಗೆದ ನಂತ್ರ ವಿಶ್ರಾಂತಿ ಪಡೆಯುವoತೆ ವೈದ್ಯರು ಸಲಹೆ ನೀಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...