alex Certify
ಕನ್ನಡ ದುನಿಯಾ       Mobile App
       

Kannada Duniya

ಲಾಲು ಸಂಕಷ್ಟದ ಹಿಂದಿದೆಯಾ ಇವರ ಶಾಪ..!?

first-transgender-mla

ರಾಷ್ಟ್ರದ ಪ್ರಥಮ ತೃತೀಯ ಲಿಂಗಿ ಶಾಸಕ ಶಬ್ನಮ್ ಮೌಸಿ, ಲಾಲು ಪ್ರಸಾದ್ ಯಾದವ್ ವಿರುದ್ಧ ಕಿಡಿಕಾರಿದ್ದಾರೆ. ಲಾಲು ಪ್ರಸಾದ್ ಯಾದವ್ ಹಾಗೂ ಅವರ ಮಕ್ಕಳ ಜೊತೆ ಈಗ ಏನಾಗ್ತಿದೆಯೋ ಅದು ಸರಿಯಾಗಿಯೇ ಆಗ್ತಿದೆ. ಲಾಲು ಹಾಗೂ ಅವರ ಕುಟುಂಬ ತಮ್ಮ ಹುದ್ದೆಯನ್ನು ದುರುಪಯೋಗಪಡಿಸಿಕೊಂಡಿವೆ ಎಂದು ಶಬ್ನಮ್ ಹೇಳಿದ್ದಾರೆ.

ಭೋಪಾಲ್ ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಶಬ್ನಮ್, 2003ರಲ್ಲಿ ಲಾಲು ಸೊಹಾಗ್ಪುರ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡಿದ್ದರು. ಇದಾದ ನಂತ್ರ ಆರ್ ಜೆ ಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಪ್ರಚಾರಕ್ಕೆ ಬರಲಿಲ್ಲ. ಇದ್ರಿಂದ ಸ್ಥಳೀಯ ಜನರು ಕೋಪಗೊಂಡಿದ್ದರು ಎಂದಿದ್ದಾರೆ.

ಚುನಾವಣೆ ಮುಗಿಯುವವರೆಗೂ ಲಾಲು ಯಾವುದೇ ಸಹಾಯ ಮಾಡಿಲ್ಲ. ಅವರ ಕಾರ್ಯಕರ್ತರು ಕೂಡ ಯಾವುದೆ ನೆರವು ನೀಡಿಲ್ಲ. ದೆಹಲಿಯಲ್ಲಿರುವ ಲಾಲು ಮನೆಗೆ ಹೋದ ನಾನು ಪಿಎ ಎದುರು ಲಾಲು ಹಾಗೂ ಅವರ ಕುಟುಂಬ ಸರ್ವನಾಶವಾಗಲಿದೆ ಎಂದು ಶಾಪ ನೀಡಿದ್ದೆ. ಆ ಶಾಪ ಈಗ ತಟ್ಟಿದೆ. ಇದ್ರಿಂದ ನನಗೆ ಬಹಳ ಖುಷಿಯಾಗಿದೆ ಎಂದಿದ್ದಾರೆ ಶಬ್ನಮ್.

2000ರಲ್ಲಿ ನಡೆದ ಚುನಾವಣೆಯಲ್ಲಿ ಸ್ಪರ್ಧೆಗೆ ನಿಂತಿದ್ದ ಶಬ್ನಮ್ ದೇಶದ ಮೊದಲ ತೃತೀಯ ಲಿಂಗಿ ಶಾಸಕರಾಗಿ ಆಯ್ಕೆಯಾದರು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...