alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರತಿಯೊಬ್ಬ ಭಾರತೀಯನೂ ಶೇರ್ ಮಾಡುವಂತಿದೆ ಈ ಫೋಟೋ

assam-flag-hoisting-650-facebook_650x400_71502977717

ಕಳೆದ ಕೆಲ ದಿನಗಳಿಂದ ಈ ಫೋಟೋ ವಾಟ್ಸಾಪ್, ಫೇಸ್ಬುಕ್, ಟ್ವಿಟ್ಟರ್ ಎಲ್ಲಾ ಕಡೆ ಹರಿದಾಡ್ತಾ ಇದೆ. ಅಸ್ಸಾಂ ಶಾಲೆಯೊಂದರಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ಈ ಫೋಟೋ ನಿಜಕ್ಕೂ ಸಖತ್ ಸ್ಪೆಷಲ್ ಆಗಿದೆ. ಈ ಫೋಟೋ ನೋಡಿದ್ರೆ ಪ್ರತಿಯೊಬ್ಬ ಭಾರತೀಯರಿಗೂ ಶೇರ್ ಮಾಡಬೇಕು ಎನಿಸದೇ ಇರೊಲ್ಲ.

ಅಸ್ಸಾಂನ ಧುಬ್ರಿಯಲ್ಲಿರೋ ನಸ್ಕರಾ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ಮಿಜನುರ್ ರೆಹಮಾನ್ ಇಬ್ಬರು ವಿದ್ಯಾರ್ಥಿಗಳ ಜೊತೆಗೆ ಸ್ವಾತಂತ್ರ್ಯ ದಿನ ಆಚರಿಸಿದ್ದಾರೆ. ಅಸ್ಸಾಂ ಭಾರೀ ಪ್ರವಾಹಕ್ಕೆ ತತ್ತರಿಸಿದೆ. ಶಾಲೆ ಕೂಡ ಸಂಪೂರ್ಣ ಜಲಾವೃತವಾಗಿತ್ತು.

ಹಾಗಂತ ಶಿಕ್ಷಕರು ಸ್ವಾತಂತ್ರ್ಯ ದಿನ ಆಚರಿಸಲು ಹಿಂದೇಟು ಹಾಕಿಲ್ಲ. ನೀರಲ್ಲೇ ನಿಂತು ದ್ವಜಾರೋಹಣ ಮಾಡಿದ್ದಾರೆ. ಮಕ್ಕಳಿಗಂತೂ ಎದೆಯವರೆಗೂ ನೀರು ಬಂದಿತ್ತು. ನೀರಿನಲ್ಲಿ ಮುಳುಗಿಕೊಂಡೇ ಅವರು ರಾಷ್ಟ್ರಧ್ವಜಕ್ಕೆ ಸೆಲ್ಯೂಟ್ ಮಾಡಿದ್ದಾರೆ.

ಪ್ರತಿ ಶಾಲೆಯಲ್ಲೂ ಸ್ವಾತಂತ್ರ್ಯ ದಿನಾಚರಣೆಯ ಫೋಟೋ ಕ್ಲಿಕ್ಕಿಸಿ ಅದನ್ನು ಶಿಕ್ಷಣ ಇಲಾಖೆಗೆ ಕಳುಹಿಸುವುದು ಕಡ್ಡಾಯ. ಹಾಗಾಗಿ ಆಸ್ಸಾಂನ ಈ ಶಾಲೆಯ ಫೋಟೋ ಕೂಡ ವೈರಲ್ ಆಗಿದೆ. ಒಂದು ಲಕ್ಷಕ್ಕೂ ಹೆಚ್ಚು ಮಂದಿ ಇದನ್ನು ಫೇಸ್ಬುಕ್ ನಲ್ಲಿ ಶೇರ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...