alex Certify
ಕನ್ನಡ ದುನಿಯಾ       Mobile App
       

Kannada Duniya

ಎಸಿ ಬೋಗಿಯಲ್ಲಿನ ಬೆಡ್ ಶೀಟ್ ಗಳನ್ನೂ ಬಿಡುತ್ತಿಲ್ಲ ಖದೀಮರು…!

ರೈಲಿನ ಎಸಿ ಬೋಗಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ನೀಡುವ ಟವೆಲ್, ಬೆಡ್‌ಶೀಟ್ ಹಾಗೂ ದಿಂಬುಗಳ್ಳರನ್ನು ಹಿಡಿಯವುದೇ ರೈಲ್ವೇ ಪೊಲೀಸರಿಗೆ ದೊಡ್ಡ ಸವಾಲಾಗಿದೆ.

ಹೌದು, ಕೇಂದ್ರ ರೈಲ್ವೆ ಇಲಾಖೆ ಅಧಿಕಾರಿಗಳ ಪ್ರಕಾರ ಎಸಿ ಕೋಚ್‌ನಲ್ಲಿ ಪ್ರಯಾಣಿಸುವ ವೇಳೆ ನೀಡುವ ಟವೆಲ್, ಬೆಡ್‌ಶೀಟ್‌ಗಳನ್ನು ಪ್ರಯಾಣಿಕರು ವಾಪಾಸು ಬೋಗಿಯಲ್ಲಿಯೇ ಬಿಟ್ಟು ಬರಬೇಕು. ಆದರೆ ಕಳೆದೊಂದು ವರ್ಷದಲ್ಲಿ ಸುಮಾರು 21 ಲಕ್ಷ ಟವೆಲ್, ಬೆಡ್‌ ಶೀಟ್‌ಗಳು ಕಾಣೆಯಾಗಿದ್ದು, ಅದನ್ನು ಪತ್ತೆ ಹಚ್ಚುವುದೇ ಸವಾಲಾಗಿದೆ‌.

ಒಟ್ಟು 21,72,246 ಬೆಡ್‌ ರೋಲ್ ಐಟಂ ಕಳಾವಾಗಿದ್ದು, ಇದರಲ್ಲಿ‌ 12,83,415 ಟವೆಲ್, 4,71,077 ಬೆಡ್‌ ಶೀಟ್, 3,14,952 ದಿಂಬಿನ ಕವರ್ ನಾಪತ್ತೆಯಾಗಿದ್ದು, ಇದರೊಂದಿಗೆ 56,287‌‌ ದಿಂಬು‌ ಹಾಗೂ 46,515 ಹೊದಿಕೆ ಕಾಣೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ರೀತಿ ಕಳುವಾಗಿರುವುದರಿಂದ ಇಲಾಖೆಗೆ 14 ಕೋಟಿ ರೂ. ನಷ್ಟವಾಗಿದ್ದು, ಇದನ್ನು‌ ತಪ್ಪಿಸಲು ಒಂದೇ ಬಾರಿ ಬಳಸುವ ಟವೆಲ್, ಕಡಿಮೆ ಗುಣಮಟ್ಟದ ದಿಂಬು ಹಾಗೂ ಬೆಡ್‌ಶೀಟ್ ನೀಡಲಾಗುತ್ತಿದೆ. ಆದರೂ ಪ್ರತಿ ಟ್ರಿಪ್ ಬಳಿಕ ಅನೇಕ ವಸ್ತುಗಳು ಕಳುವಾಗಿರುತ್ತದೆ. ಇದನ್ನು ಪತ್ತೆ ಹಚ್ಚುವುದು ಸವಾಲಿನ ಕೆಲಸ ಎಂದಿದ್ದಾರೆ. ದೇಶದಲ್ಲಿರುವ ಎಲ್ಲ ರೈಲ್ವೇ ಝೋನ್ ಗಳಲ್ಲಿಯೂ ಇದೇ ಸಮಸ್ಯೆಯಾಗಿರುವುದರಿಂದ, ಕೆಲ‌‌ ಕಠಿಣ ಕ್ರಮ ಅನಿರ್ವಾಯ ಎಂದು‌ ಅಧಿಕಾರಿಗಳು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...