alex Certify
ಕನ್ನಡ ದುನಿಯಾ       Mobile App
       

Kannada Duniya

ಭ್ರಷ್ಟಾಚಾರವೆಸಗಿದ್ದವನಿಗೆ ‘ಲೇಡಿ ಸಿಂಗಂ’ ಕೊಟ್ಟ ಶಿಕ್ಷೆಯೇನು?

lady singham 457ಭ್ರಷ್ಟಾಚಾರವೆಸಗಿದ್ದ ಪಂಚಾಯಿತಿ ಕಾರ್ಯದರ್ಶಿಯೊಬ್ಬನಿಗೆ ಮಧ್ಯ ಪ್ರದೇಶದ ‘ಲೇಡಿ ಸಿಂಗಂ’ ಎಂದೇ ಖ್ಯಾತರಾಗಿರುವ ಮಹಿಳಾ ಐಎಎಸ್ ಅಧಿಕಾರಿ ಸರಿಯಾಗಿಯೇ ಪಾಠ ಕಲಿಸಿದ್ದಾರೆ.

ಮಧ್ಯ ಪ್ರದೇಶದ ಸಿಂಗ್ರೂಲಿ ಜಿಲ್ಲೆಯ ಹಳ್ಳಿಯೊಂದಕ್ಕೆ ಐಎಎಸ್ ಅಧಿಕಾರಿ ನಿಧಿ ನಿವೇದಿತಾ, ಕಾಮಗಾರಿಗಳ ಪರಿಶೀಲನೆಗೆಂದು ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅಲ್ಲಿನ ಪಂಚಾಯಿತಿ ಕಾರ್ಯದರ್ಶಿ ರಾಮಸುಭಾಶ್ ಸಿಂಗ್, ಟಾಯ್ಲೆಟ್ ಗೆ ವಾಶ್ ಬೇಸಿನ್ ಅಳವಡಿಸದಿದ್ದರೂ ಅದರ ಫೋಟೋ ತೋರಿಸಿ ಬಿಲ್ ಪಡೆದುಕೊಂಡಿದ್ದ.

ಇದು ಜಿಲ್ಲಾಧಿಕಾರಿ ನಿಧಿ ನಿವೇದಿತಾ ಅವರ ಗಮನಕ್ಕೆ ಬರುತ್ತಿದ್ದಂತೆಯೇ ಕೆಂಡಾಮಂಡಲಗೊಂಡ ಅವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಗ್ರಾಮಸ್ಥರ ಸಮ್ಮುಖದಲ್ಲಿಯೇ ಆ ಕಾರ್ಯದರ್ಶಿಗೆ ಉಠ್ ಬೈಸ್ ಮಾಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...