alex Certify
ಕನ್ನಡ ದುನಿಯಾ       Mobile App
       

Kannada Duniya

ರಸ್ತೆ ಮಧ್ಯೆ ಮಹಿಳೆಗೆ ಹೊಡೆಯುತ್ತಿದ್ದರೆ ವಿಡಿಯೋ ಮಾಡಿದ್ರು ಜನ

ಮಹಿಳೆ ಎಲ್ಲೂ ಸುರಕ್ಷಿತಳಲ್ಲ. ತನ್ನ ಮನೆಯಲ್ಲೇ ಮಹಿಳೆ ಸುರಕ್ಷಿತಳಲ್ಲ. ಇದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಈಗ ಇನ್ನೊಂದು ನಿದರ್ಶನ ಸಿಕ್ಕಿದೆ. ಮನೆಯಿಂದ ಮಹಿಳೆಯನ್ನು ರಸ್ತೆಗೆಳೆದು ತಂದು ಅತ್ತೆ-ನಾದಿನಿ ಮನಸ್ಸಿಗೆ ಬಂದಂತೆ ಹೊಡೆದಿದ್ದಾರೆ. ರಸ್ತೆ ಬಳಿ ನಿಂತಿದ್ದ ಜನರು ಮಹಿಳೆ ಹೊಡೆತ ತಿನ್ನೋದನ್ನು ನೋಡಿದ್ದಾರೆ ವಿನಃ ಬಿಡಿಸಲು ಮುಂದಾಗಲಿಲ್ಲ.

ಘಟನೆ ಬಿಹಾರದಲ್ಲಿ ನಡೆದಿದೆ. ನಳಂದದ ಆಸ್ಪತ್ರೆ ಚೌಕದ ಬಳಿ ಅತ್ತೆ ಹಾಗೂ ನಾದಿನಿ ಸೊಸೆಗೆ ಒದೆ ನೀಡಿದ್ದಾರೆ. ಎಳೆದೆಳೆದು ಚಪ್ಪಲಿಯಲ್ಲಿ ಹೊಡೆದಿದ್ದಾರೆ. ಮಹಿಳೆ ತನ್ನನ್ನು ಬಿಡಿಸುವಂತೆ ರಸ್ತೆ ಬದಿ ನಿಂತಿದ್ದ ಜನರಿಗೆ ಪರಿಪರಿಯಾಗಿ ಬೇಡಿದ್ದಾಳೆ. ಆದ್ರೆ ಯಾರೂ ಮಹಿಳೆ ರಕ್ಷಣೆಗೆ ಬಂದಿಲ್ಲ. ಮೊಬೈಲ್ ಹಿಡಿದು ಹೈಡ್ರಾಮಾದ ವಿಡಿಯೋ ಮಾಡಿದ್ದಾರೆ.

ದಾರಿಯಲ್ಲಿ ಹೋಗ್ತಿದ್ದ ಎಸ್ಡಿಓ ಒಬ್ಬರು ತಮ್ಮ ಬಾಡಿಗಾರ್ಡ್ ಕಳುಹಿಸಿ ಮಹಿಳೆ ರಕ್ಷಣೆ ಮಾಡಿದ್ದಾರೆ. ಪೊಲೀಸ್ ಠಾಣೆಯಲ್ಲಿ ಮಹಿಳೆ ಪತಿ,ನಾದಿನಿ,ಅತ್ತೆ ವಿರುದ್ಧ ದೂರು ನೀಡಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...