alex Certify
ಕನ್ನಡ ದುನಿಯಾ       Mobile App
       

Kannada Duniya

`ಕೈ’ಯ್ಯಲ್ಲಿ ಕಾಸಿಲ್ಲ; ಆಮೆಗತಿಯಲ್ಲಿ ಸಾಗುತ್ತಿದೆ ಕಾಂಗ್ರೆಸ್ ನೂತನ ಕಚೇರಿ ನಿರ್ಮಾಣ ಕಾರ್ಯ

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ರಾಷ್ಟ್ರ ರಾಜಧಾನಿ ದೆಹಲಿಯ ರೋಸ್ ಎವೆನ್ಯೂನಲ್ಲಿ ನೂತನ ಕಾಂಗ್ರೆಸ್ ಕಚೇರಿ `ಇಂದಿರಾ ಭವನ’ ಈಗಾಗಲೇ ಉದ್ಘಾಟನೆಗೊಳ್ಳಬೇಕಾಗಿತ್ತು.

ನವೆಂಬರ್ ಮಧ್ಯದಲ್ಲೇ ಉದ್ಘಾಟನೆಯ ಲೆಕ್ಕಾಚಾರವಿತ್ತು. ಈಗಾಗಲೇ ದೇಶದ ಹೆಚ್ಚಿನ ಭಾಗದಲ್ಲಿ ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್ ಪಕ್ಷದ ಖಜಾನೆ ಹಿಂದಿನ ಹಾಗಿಲ್ಲ ಎಂಬುದು ತಿಳಿದೇ ಇರುವ ವಿಚಾರ. ಜೊತೆಗೆ ಇದೀಗ ಎದುರಾಗಿರುವ ಐದು ರಾಜ್ಯಗಳ ವಿಧಾನಸಭಾ ಚನಾವಣೆಯಿಂದಾಗಿ ಕಾಂಗ್ರೆಸ್ ಪಕ್ಷದ ಕೈ ಕಟ್ಟಿದೆ.

ಕಳೆದ ನಲವತ್ತು ವರ್ಷಗಳಿಂದಲೂ ಕಾಂಗ್ರೆಸ್ ಕಚೇರಿ 26 ಅಕ್ಬರ್ ರಸ್ತೆಯಲ್ಲಿತ್ತು. ಇದೀಗ ನಿರ್ಮಿಸಲ್ಪಡುತ್ತಿರುವ ಪಕ್ಷದ ನೂತನ ಕಚೇರಿಗೆ 2016 ರಲ್ಲೇ ಶಂಕುಸ್ಥಾಪನೆಯಾಗಿ ಕೆಲಸ ಪ್ರಾರಂಭವಾಗಿತ್ತು. ಒಟ್ಟು 172 ಕೋಟಿ ರೂ. ಅಂದಾಜು ವೆಚ್ಚದ ಕಟ್ಟಡವನ್ನು ಪ್ರಸಿದ್ಧ ನಿರ್ಮಾಣ ಸಂಸ್ಥೆಯಾದ ಎಲ್ ಆಂಡ್ ಟಿ ಕನ್ ಸ್ಟ್ರಕ್ಷನ್ ಗೆ ವಹಿಸಿಕೊಡಲಾಗಿದೆ.

ಈವರೆಗೂ ಸುಮಾರು 80 ಕೋಟಿ ರೂ. ಖರ್ಚು ಮಾಡಿ ಅರ್ಧದಷ್ಟು ನಿರ್ಮಾಣ ಕಾರ್ಯ ಮುಗಿದಿದೆ. ಇನ್ನುಳಿದ ಹಣ ಹೊಂದಿಸಿದಲ್ಲಿ ನಾಲ್ಕು ತಿಂಗಳಲ್ಲೇ ಮುಗಿಸಲು ಸಾಧ್ಯ. ಆದರೆ ಮುಖಂಡರೆಲ್ಲಾ ಚುನಾವಣಾ ಪ್ರಚಾರದಲ್ಲಿ ತೊಡಗಿರುವುದರಿಂದ ಯಾವುದೇ ನಿರ್ದೇಶನ ಬಂದಿಲ್ಲ ಎಂದು ಮೂಲಗಳು ತಿಳಿಸಿವೆ.

Related News

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...