alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿಗೆ ಗನ್ ಕೊಟ್ಟ ಎಸ್ಪಿ ಮೇಲೆ ಬಿತ್ತು ಕೇಸ್

sp-gun

ಕರ್ನೂಲ್ ಎಸ್ಪಿ ಎ. ರವಿಕೃಷ್ಣ ತಮ್ಮ ಪತ್ನಿಗೆ ಎಕೆ-47 ಗನ್ ಕೊಟ್ಟು ಈಗ ಪಜೀತಿ ಅನುಭವಿಸ್ತಿದ್ದಾರೆ. ಎಸ್ಪಿ ರವಿಕೃಷ್ಣ ವಿರುದ್ಧ ಕೈಗೊಂಡಿರುವ ಕ್ರಮಗಳ ಬಗ್ಗೆ ವರದಿ ನೀಡುವಂತೆ ಹೈದ್ರಾಬಾದ್ ಹೈಕೋರ್ಟ್ ಆಂಧ್ರಪ್ರದೇಶ ಸರ್ಕಾರಕ್ಕೆ ಸೂಚಿಸಿದೆ.

ಗುಂಟೂರು ಎಸ್ಪಿಯಾಗಿದ್ದಾಗ ರವಿಕೃಷ್ಣ ತಮ್ಮ ಪತ್ನಿ ದೇವಿಯನ್ನು APSP 6ನೇ ಬೆಟಾಲಿಯನ್ ಫೈರಿಂಗ್ ರೇಂಜ್ ಗೆ ಕರೆದೊಯ್ದಿದ್ದಾರೆ. ತಮ್ಮ ಗನ್ ಅನ್ನು ಪತ್ನಿಗೆ ಕೊಟ್ಟು ಫೈರಿಂಗ್ ಪ್ರಾಕ್ಟೀಸ್ ಮಾಡುವಂತೆ ಸೂಚಿಸಿದ್ದಾರೆ. ಇದು ಅಖಿಲ ಭಾರತ ಸೇವಾ ನಿಯಮದ ವಿರುದ್ಧವಾಗಿದ್ದು, ರವಿಕೃಷ್ಣ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಂಧ್ರ ಮುಖ್ಯಕಾರ್ಯದರ್ಶಿಗಳಿಗೆ ಸೂಚಿಸಬೇಕೆಂದು ವಕೀಲ ಬಿ. ಪುರುಷೋತ್ತಮ ರೆಡ್ಡಿ ಕೋರ್ಟ್ ಮೊರೆಹೋಗಿದ್ರು.

ನಿಯಮದ ಪ್ರಕಾರ ಪೊಲೀಸ್ ಅಧಿಕಾರಿಗಳಿಗೆ ನೀಡಿರುವ ಶಸ್ತ್ರಾಸ್ತ್ರವನ್ನು ಕುಟುಂಬದ ಯಾವ ಸದಸ್ಯರೂ ಬಳಸುವಂತಿಲ್ಲ. ದೇವಿ, ರವಿಕೃಷ್ಣ ಅವರ ರೈಫಲ್ ಅನ್ನು ಕೈಯಲ್ಲಿ ಹಿಡಿದು ವೀಕ್ಷಿಸಿದ್ದಾರಷ್ಟೆ, ಬಳಸಿಲ್ಲ ಅಂತಾ ಸರ್ಕಾರದ ಪರ ವಕೀಲೆ ವಾದಿಸಿದ್ದಾರೆ. ವಕೀಲ ಪುರುಷೋತ್ತಮ, ದುರುದ್ದೇಶದಿಂದ ಈ ಕೇಸ್ ದಾಖಲಿಸಿದ್ದಾರೆ ಅಂತಾ ಹೇಳಿದ್ದಾರೆ. ಕೋರ್ಟ್ ವಿಚಾರಣೆಯನ್ನು 2 ವಾರ ಮುಂದೂಡಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...