alex Certify
ಕನ್ನಡ ದುನಿಯಾ       Mobile App
       

Kannada Duniya

ಠೇವಣಿ ಕಳೆದುಕೊಂಡ `ಗೋಲ್ಡನ್ ಅಭ್ಯರ್ಥಿ’

ಗುಜರಾತ್ ವಿಧಾನಸಭೆ ಪ್ರಚಾರದ ವೇಳೆ ಅನೇಕ ಆರೋಪ-ಪ್ರತ್ಯಾರೋಪಗಳು ಕೇಳಿ ಬಂದಿವೆ. ಈ ಮಧ್ಯೆ ಗೋಲ್ಡನ್ ಅಭ್ಯರ್ಥಿಯೊಬ್ಬ ಎಲ್ಲರ ಗಮನ ಸೆಳೆದಿದ್ದ. ಹೆಸರು ಕುಂಜಾಲ್ ಪಟೇಲ್. ಬಂಗಾರವನ್ನೇ ಮೈಮೇಲೆ ಹೊತ್ತು ಪ್ರಚಾರ ಮಾಡಿದ್ದ ಈ ಅಭ್ಯರ್ಥಿ.

ಅಹಮದಾಬಾದ್ ಜಿಲ್ಲೆಯ ದರ್ಯಾಯಾಪುರ್ ಕ್ಷೇತ್ರದಿಂದ ಈತ ಸ್ಪರ್ಧೆ ನಡೆಸಿದ್ದ. ಶಿವಸೇನೆ ಈತನಿಗೆ ಟಿಕೆಟ್ ನೀಡಿತ್ತು. ಪ್ರಚಾರಕ್ಕೆ ತೆರಳುವ ವೇಳೆ ಮನೆಯಲ್ಲಿದ್ದ ಎಲ್ಲ ಬಂಗಾರ ಧರಿಸಿ ಹೊರಗೆ ಬೀಳ್ತಿದ್ದ ಕುಂಜಾಲ್. ಚುನಾವಣೆ ಪ್ರಚಾರದ ವೇಳೆ ಎಲ್ಲರ ಗಮನ ಸೆಳೆದಿದ್ದ ಕುಂಜಾಲ್ 45 ತೊಲೆ ಬಂಗಾರ ಮನೆಯಲ್ಲಿದೆ ಎಂದು ಚುನಾವಣಾ ಆಯೋಗಕ್ಕೆ ತಿಳಿಸಿದ್ದ. 25 ಸಾವಿರ ನಗದು, ಎರಡು ಕಾರ್ ಹೊಂದಿರುವುದಾಗಿ ಈತ ಹೇಳಿದ್ದ.

ಈತ ತೊಟ್ಟ ಬಂಗಾರದಲ್ಲಿ ಬಹುತೇಕ ಬಂಗಾರ ಪತ್ನಿ ಹಾಗೂ ಸಹೋದರನದ್ದು ಎಂದು ಈತ ಹೇಳಿದ್ದ. ಇಷ್ಟು ಬಂಗಾರ ಹಾಕಿಕೊಂಡು ಪ್ರಚಾರ ಮಾಡಿದ್ದ ಕುಂಜಾಲ್ ಗೆ ಜಯಸಿಗಲಿಲ್ಲ. ಕುಂಜಲ್ ಕೇವಲ 1393 ವೋಟ್ ಗಳಿಸಿದ್ದಾನೆ. ಈ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಕಾಂಗ್ರೆಸ್ ಅಭ್ಯರ್ಥಿ ಶೇಖ್ ಗಾಹಸೂದಿನ್ ಗೆಲುವು ಸಾಧಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...