alex Certify
ಕನ್ನಡ ದುನಿಯಾ       Mobile App
       

Kannada Duniya

ವಿವಾಹಿತ ವಿದ್ಯಾರ್ಥಿನಿಗೆ ಪ್ರವೇಶ ನಿರಾಕರಿಸಿದ ಕಾಲೇಜ್

Love-marriage

ಕೇರಳ: ಅನ್ಯ ಧರ್ಮದ ಯುವಕನನ್ನು ಪೋಷಕರ ಸಮ್ಮತಿಯಿಲ್ಲದೇ ವಿವಾಹ ಮಾಡಿಕೊಂಡ ವಿದ್ಯಾರ್ಥಿನಿಗೆ ತರಗತಿ ಪ್ರವೇಶಿಸಲು ಅವಕಾಶ ನಿರಾಕರಿಸುವ ಮೂಲಕ ಕಾಲೇಜ್ ಒಂದು ವಿವಾದ ಸೃಷ್ಟಿಸಿದೆ.

ಕೇರಳದ ಕೋಝಿಕೋಡ್ ನ ನಡಕ್ಕಾವು ಎಂಬಲ್ಲಿ ಈ ಘಟನೆ ನಡೆದಿದ್ದು, ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ಓದುತ್ತಿದ್ದ ನೀರಜಾ ಎಂಬ ವಿದ್ಯಾರ್ಥಿನಿ ಫೆಬ್ರವರಿ 1 ರಂದು ತನ್ನ ಪ್ರಿಯತಮ ಮಹಮ್ಮದ್ ರಮೀಸ್ ಎಂಬಾತನೊಂದಿಗೆ ಪರಾರಿಯಾಗಿದ್ದಳು.

ಈ ಕುರಿತು ಆಕೆಯ ಪೋಷಕರು ಪ್ರಕರಣ ದಾಖಲಿಸಿದ್ದು, ಫೆಬ್ರವರಿ 6 ರಂದು ಮಹಮ್ಮದ್ ರಮೀಸ್ ನೊಂದಿಗೆ ವಿವಾಹ ಮಾಡಿಕೊಂಡು ನೋಂದಣಿ ಮಾಡಿಸಿದ ಬಳಿಕ ನೀರಜಾ ಮರಳಿ ಬಂದಿದ್ದಳು. ತನ್ನ ಪತಿಯೊಂದಿಗೆ ವಾಸಿಸುತ್ತಿರುವ ಆಕೆ ಫೆಬ್ರವರಿ 11 ರಂದು ಕಾಲೇಜಿಗೆ ತೆರಳಿದ ವೇಳೆ ಪ್ರವೇಶ ನಿರಾಕರಿಸಲಾಗಿದೆ.

ಅಲ್ಲದೇ ಪೋಷಕರ ಸಮ್ಮತಿಯಿಲ್ಲದೇ ವಿವಾಹವಾಗಿರುವ ಕಾರಣ ಪ್ರವೇಶ ನೀಡಿಲ್ಲವೆಂದು ಹೇಳಿದ್ದಾರೆನ್ನಲಾಗಿದೆ. ಆದರೆ ಈ ವಿಚಾರ ವಿವಾದಕ್ಕೊಳಗಾಗುತ್ತಿದ್ದಂತೆಯೇ ಇದನ್ನು ನಿರಾಕರಿಸುತ್ತಿರುವ ಕಾಲೇಜು ಪ್ರಾಂಶುಪಾಲರು, ವಿದ್ಯಾರ್ಥಿನಿ ಜನವರಿ 29 ರಿಂದ ಅನುಮತಿಯಿಲ್ಲದೇ ಸತತವಾಗಿ ಗೈರು ಹಾಜರಾಗಿದ್ದು, ಈ ಹಿನ್ನಲೆಯಲ್ಲಿ ಪೋಷಕರನ್ನು ಕರೆದುಕೊಂಡು ಬರುವಂತೆ ಹೇಳಿದ್ದಾಗಿ ತಿಳಿಸಿದ್ದಾರೆ. ಆಕೆ ತನ್ನ ವಿವಾಹ ಪ್ರಮಾಣ ಪತ್ರವನ್ನು ಹಾಜರುಪಡಿಸಿದರೆ ಪ್ರವೇಶ ನೀಡುವುದಾಗಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...