alex Certify
ಕನ್ನಡ ದುನಿಯಾ       Mobile App
       

Kannada Duniya

ಯೋಗ ದಿನದಂದು ವಿಶ್ವ ದಾಖಲೆ ಬರೆಯಲಿದೆ ಬಾಬಾ ರಾಮ್ದೇವ್ ತಂಡ

ರಾಜಸ್ತಾನದ ಕೋಟಾದಲ್ಲಿ ಅಂತರಾಷ್ಟ್ರೀಯ ಯೋಗ ದಿನದಂದು ಯೋಗ ಗುರು ಬಾಬಾ ರಾಮ್ದೇವ್ ವಿಶ್ವ ದಾಖಲೆ ಬರೆಯಲಿದ್ದಾರೆ. ಒಂದು ಸ್ಥಳದಲ್ಲಿ ಎರಡುವರೆ ಲಕ್ಷ ಜನರು ಯೋಗ ಮಾಡಿ ದಾಖಲೆ ಬರೆಯಲಿದ್ದಾರೆ. ಈ ಹಿನ್ನೆಲೆಯಲ್ಲಿ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ತಂಡ ಕೋಟಾಕ್ಕೆ ಬರಲಿದೆ.

ಕೋಚಿಂಗ್ ಇನ್ಸ್ಟಿಟ್ಯೂಟ್ ನ ವಿದ್ಯಾರ್ಥಿಗಳು, ಸೇನೆ, ಪೊಲೀಸರ ಜೊತೆಗೆ ಗ್ರಾಮದ ಜನರು ಯೋಗದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಳೆದ ಮೂರು ದಿನಗಳಿಂದ ಕೋಟಾದಲ್ಲಿರುವ ಬಾಬಾ ರಾಮ್ದೇವ್ ಅಭ್ಯರ್ಥಿಗಳಿಗೆ ಯೋಗದ ತರಬೇತಿ ನೀಡ್ತಿದ್ದಾರೆ. ಈ ಮಧ್ಯೆ ಸ್ಥಳೀಯ ಕಾಂಗ್ರೆಸ್ ಬಾಬಾ ಕಾರ್ಯಕ್ರಮವನ್ನು ಬಹಿಷ್ಕರಿಸಿದೆ. ಕಾಂಗ್ರೆಸ್ ನ ಯಾವುದೇ ನಾಯಕರು ಯೋಗ ಶಿಬಿರದಲ್ಲಿ ಪಾಲ್ಗೊಳ್ಳುತ್ತಿಲ್ಲ. ಈ ಕಾರ್ಯಕ್ರಮ ವಿರೋಧಿಸಿ ಗುರುವಾರ ಪ್ರತಿಭಟನೆ ನಡೆಯಲಿದೆ.

ಕಾಂಗ್ರೆಸ್ ನಾಯಕರನ್ನು ರಾಮ್ದೇವ್ ಯೋಗ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದಾರೆ. ರಾಹುಲ್ ಹಾಗೂ ಸೋನಿಯಾ ಗಾಂಧಿ ಮೇಲೆ ನನಗೆ ಮುನಿಸಿಲ್ಲ. ನಾನೊಬ್ಬ ಸಂತ. ದೆಹಲಿ ರಾಮ್ ಲೀಲಾ ಮೈದಾನದಲ್ಲಿ ನಡೆದ ಘಟನೆಯನ್ನು ನಾನು ಮರೆತಿದ್ದೇನೆ ಎಂದು ರಾಮ್ದೇವ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...