alex Certify
ಕನ್ನಡ ದುನಿಯಾ       Mobile App
       

Kannada Duniya

ಕುಡಿದು ಬಂದ್ರೆ ದಂಡದ ರೂಪದಲ್ಲಿ ನೀಡಬೇಕು ತೆಂಗಿನಕಾಯಿ

coconut_penalty_

ಸಾರಾಯಿ ಮುಕ್ತ ಸಮಾಜಕ್ಕಾಗಿ ಅನೇಕ ಊರುಗಳಲ್ಲಿ ಮಹಿಳೆಯರು ಒಂದಾಗಿದ್ದಾರೆ. ಕಳ್ಳಬಟ್ಟಿ ಸಾರಾಯಿ ಮಾರಾಟದ ವಿರುದ್ಧ ಹೋರಾಟಕ್ಕಿಳಿದಿದ್ದಾರೆ. ಛತ್ತೀಸಗಢದ ಮಂಗ್ದಿ ಗ್ರಾಮ ಈಗ ಎಲ್ಲರಿಗೂ ಮಾದರಿಯಾಗಿದೆ. ಅಲ್ಲಿನ ಹಿರಿಯರು, ಪಂಚಾಯತಿ ಸದಸ್ಯರು ಕಳ್ಳಬಟ್ಟಿಯನ್ನು ಸಂಪೂರ್ಣವಾಗಿ ನಿಷೇಧಿಸಿದ್ದಾರೆ. ಅಪ್ಪಿತಪ್ಪಿ ಕುಡಿದು ಬಂದ್ರೆ ದಂಡ ಗ್ಯಾರಂಟಿ.

ಸುಮಾರು 500 ಒರಾನ್ ಬುಡಕಟ್ಟು ಜನಾಂಗದವರು ಇಲ್ಲಿ ವಾಸವಾಗಿದ್ದಾರೆ. ಅಕ್ಕಿ ವೈನ್ ಇಲ್ಲಿ ಸಾಕಷ್ಟು ದುರಂತಕ್ಕೆ ಕಾರಣವಾಗಿತ್ತಂತೆ. ಪ್ರತಿದಿನ ಗ್ರಾಮದಲ್ಲಿ ಗಲಾಟೆ ಮಾಮೂಲಿಯಾಗಿತ್ತಂತೆ. ಇದಕ್ಕೆಲ್ಲ ಅಂತ್ಯ ಹಾಡಲು ಹಿರಿಯರು ಮುಂದಾಗಿದ್ದಾರೆ. ಪಂಚಾಯತಿ ಸೇರಿ ಒಂದು ನಿರ್ಣಯಕ್ಕೆ ಬಂದಿದ್ದಾರೆ.

ನಿಯಮ ಮೀರಿ ಕುಡಿಯುವ ವ್ಯಕ್ತಿಗೆ ಮೊದಲು ದಂಡ ವಿಧಿಸಲಾಗುತ್ತದೆ. ಕುಡಿದ ವ್ಯಕ್ತಿ ಒಂದು ತೆಂಗಿನಕಾಯಿಯನ್ನು ದಂಡದ ರೂಪದಲ್ಲಿ ನೀಡಬೇಕು. ದಂಡ ನೀಡಿ ಮತ್ತೆ ಅದೇ ತಪ್ಪು ಮಾಡಿದ್ರೆ ಆತನನ್ನು ಪೊಲೀಸರಿಗೆ ನೀಡುವ ನಿರ್ಧಾರವನ್ನು ಗ್ರಾಮಸ್ಥರು ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...