alex Certify
ಕನ್ನಡ ದುನಿಯಾ       Mobile App
       

Kannada Duniya

ದುರ್ಗಾ ಪೆಂಡಾಲ್ ನಲ್ಲಿ ಡ್ರ್ಯಾಗನ್ ಡಾನ್ಸ್

ದೇಶ-ವಿದೇಶಗಳಲ್ಲಿ ಪಶ್ಚಿಮ ಬಂಗಾಳ ದುರ್ಗಾ ಪೂಜೆ ಪ್ರಸಿದ್ಧಿ ಪಡೆದಿದೆ.ಈ ಬಾರಿ ಅಲ್ಲಿನ ದುರ್ಗಾ ಪೂಜೆ ಮತ್ತಷ್ಟು ವಿಶೇಷ ರಂಗು ಪಡೆಯಲಿದೆ. ರಾಜ್ಯದ ವ್ಯಾಪಾರ ಹಾಗೂ ಸಂಸ್ಕೃತಿಗೆ ಹೆಚ್ಚು ಪ್ರೋತ್ಸಾಹ ನೀಡಲು ಚೀನಾ, ದುರ್ಗಾ ಪೂಜೆಯ ಪ್ರಾಯೋಜಕತ್ವ ಪಡೆದಿದೆ.

ಚೀನಾದ ವಾಣಿಜ್ಯ ರಾಯಬಾರಿ ಕಚೇರಿ ಈ ಬಾರಿ ಕೋಲ್ಕತ್ತಾದ ಬಿ.ಜೆ. ಬ್ಲಾಕ್ ದುರ್ಗಾ ಪೂಜೆಯ ಪ್ರಾಯೋಜಕತ್ವ ಪಡೆದಿದೆ. ರಾಜ್ಯದ ಸಂಸ್ಕೃತಿಯನ್ನು ಎಲ್ಲೆಡೆ ಪಸರಿಸಲು ಅನೇಕ ವರ್ಷಗಳಿಂದ ಚೀನಾ ದುರ್ಗಾ ಪೂಜೆಗಳ ಪ್ರಾಯೋಜಕತ್ವ ವಹಿಸಿಕೊಳ್ಳುತ್ತ ಬಂದಿದೆ.

ಈ ಬಾರಿಯೂ ಕೋಲ್ಕತ್ತಾ ಬಿ.ಜೆ. ಬ್ಲಾಕ್ ದುರ್ಗಾ ಪೂಜೆಯನ್ನು ವಿಶೇಷಗೊಳಿಸಲು ಚೀನಾ ಪೊಲೀಸರ ನೆರವು ಪಡೆದಿದೆ. ಜೊತೆಗೆ ದುರ್ಗಾ ಪೂಜೆಗೆ ತಯಾರಿ ನಡೆಸುವ ಕಲಾಕಾರರನ್ನು ಚೀನಾ ತನ್ನ ದೇಶಕ್ಕೆ ಕಳುಹಿಸಲಿದೆ. ಚೀನಾ ಕಲೆಯನ್ನು ಕೋಲ್ಕತ್ತಾ ಕಲಾಕಾರರಿಗೆ ಪರಿಚಯಿಸುವ ಪ್ರಯತ್ನಕ್ಕೆ ಚೀನಾ ಮುಂದಾಗಿದೆ.

ದುರ್ಗಾ ಪೆಂಡಾಲ್ ನಲ್ಲಿ ಚೀನಿ ಕಲೆ ಕಾಣಿಸಲಿ ಎಂಬುದು ಚೀನಾದ ಉದ್ದೇಶವಾಗಿದೆ. ಈ ಬಾರಿ ದುರ್ಗಾ ಪೆಂಡಾಲ್ ಪಗೋಡಾ ರೀತಿಯಲ್ಲಿ ಕಾಣಿಸುವ ಸಾಧ್ಯತೆಯಿದೆ. ದುರ್ಗಾ ಪೆಂಡಾಲ್ ನಲ್ಲಿ ಡ್ರ್ಯಾಗನ್ ಡಾನ್ಸ್ ನೋಡುವ ಅವಕಾಶ ಸಿಗಲಿದೆ. ದುರ್ಗಾ ಪೂಜೆಗೆ ದೇಶ-ವಿದೇಶದಿಂದ ಜನರು ಬರ್ತಾರೆ. ಹೆಚ್ಚೆಚ್ಚು ಸಂಖ್ಯೆಯನ್ನು ಜನರನ್ನು ಆಕರ್ಷಿಸಲು ಇದು ನೆರವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...