alex Certify
ಕನ್ನಡ ದುನಿಯಾ       Mobile App
       

Kannada Duniya

ಒಂದೇ ಶಾಲೆಯಲ್ಲಿ 10 ಸಲಿಂಗ ಕಾಮಿಗಳು…!

ಕೋಲ್ಕತ್ತಾದ ಖಾಸಗಿ ಶಾಲೆಯೊಂದು ವಿದ್ಯಾರ್ಥಿನಿಯರ ವಿರುದ್ಧ ಗಂಭೀರ ಆರೋಪ ಮಾಡಿದೆ. 10 ವಿದ್ಯಾರ್ಥಿನಿಯರು ಸಲಿಂಗಕಾಮಿಗಳೆಂದು ಆರೋಪ ಮಾಡಿದೆ. ಇದ್ರಿಂದ  ಕೋಪಗೊಂಡ ಪಾಲಕರು ಶಾಲೆ ಮೇಲೆ ದಾಳಿ ನಡೆಸಿದ್ದಾರೆ.

ದಕ್ಷಿಣ ಕೋಲ್ಕತ್ತಾದ ಕಮಲಾ ಗರ್ಲ್ಸ್ ಶಾಲೆಯಲ್ಲಿ ಘಟನೆ ನಡೆದಿದೆ. ಶಾಲಾ ನಿರ್ದೇಶಕರು ವಿದ್ಯಾರ್ಥಿನಿಯರನ್ನು ಬೆದರಿಸಿ ಸಲಿಂಗಕಾಮಿಗಳು ಎಂಬ ಪತ್ರಕ್ಕೆ ಸಹಿ ಹಾಕಿಸಿದ್ದಾರೆಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. 10 ವಿದ್ಯಾರ್ಥಿನಿಯರ ವಿರುದ್ಧ ಶಾಲೆಯ ಕೆಲ ವಿದ್ಯಾರ್ಥಿನಿಯರು ದೂರು ನೀಡಿದ್ದರಂತೆ. ವಿಚಾರಣೆಗೆ ಕರೆದಾಗ ನಿರ್ದೇಶಕರ ಮುಂದೆ ವಿದ್ಯಾರ್ಥಿನಿಯರು ಸಲಿಂಗ ಕಾಮಿಗಳು ಎಂಬುದನ್ನು ಒಪ್ಪಿಕೊಂಡಿದ್ದರಂತೆ.

ಸೂಕ್ಷ್ಮ ವಿಷ್ಯವಾಗಿದ್ದರಿಂದ ಲಿಖಿತ ಹೇಳಿಕೆ ಪಡೆದಿದ್ದ ಆಡಳಿತ ಮಂಡಳಿ ಮಾತುಕತೆಗೆ ಪಾಲಕರನ್ನು ಕರೆಸಿತ್ತಂತೆ. ಪಾಲಕರಿಗೆ ಈ ಬಗ್ಗೆ ಮಾಹಿತಿ ನೀಡಿ ಮಕ್ಕಳನ್ನು ಸರಿದಾರಿಗೆ ತರುವುದು ಶಾಲೆಯ ಉದ್ದೇಶವಾಗಿತ್ತಂತೆ. ಆದ್ರೆ ಪಾಲಕರು ಗಲಾಟೆ ಶುರು ಮಾಡಿದ್ದಾರೆ. ಶಾಲೆ ಮಕ್ಕಳ ಭವಿಷ್ಯವನ್ನು ಹಾಳು ಮಾಡ್ತಿದೆ ಎಂದು ಕಿಡಿಕಾರಿದ್ದಾರೆ ಎಂದು ಆಡಳಿತ ಮಂಡಳಿ ತಿಳಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...