alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್! ಲಂಚ ಕೊಡಲೊಪ್ಪದ ವ್ಯಕ್ತಿಯ ಹತ್ಯೆ

ಟ್ರಾಫಿಕ್ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸುತ್ತಿದ್ದವರು ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿಕೊಂಡು ಬಂದ ವ್ಯಕ್ತಿಯನ್ನು ಅಡ್ಡಗಟ್ಟಿದ್ದು, ಲಂಚಕ್ಕೆ ಬೇಡಿಕೆ ಇಟ್ಟ ವೇಳೆ ಆತ ನಿರಾಕರಿಸಿದ ಕಾರಣಕ್ಕೆ ಹಲ್ಲೆ ಮಾಡಿದ ಪರಿಣಾಮ ಆತ ಸಾವನ್ನಪ್ಪಿದ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

ಉತ್ತರ ಪರಾಗಣ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಸೌಮೇನ್ ದೇಬನಾಥ್ (49) ಎಂಬವರು ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿಕೊಂಡು ಬಂದಿದ್ದಾರೆ. ಈ ವೇಳೆ ಟ್ರಾಫಿಕ್ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಇಬ್ಬರು ಸೌಮೇನ್ ರನ್ನು ಅಡ್ಡಗಟ್ಟಿದ್ದಾರೆ.

ಬಿಟ್ಟು ಕಳುಹಿಸಲು ಲಂಚ ನೀಡುವಂತೆ ಸೌಮೇನ್ ಮುಂದೆ ಅವರುಗಳು ಬೇಡಿಕೆ ಇಟ್ಟಿದ್ದು, ಆಗ ಮಾತಿನ ಚಕಮಕಿ ನಡೆದಿದೆ. ಸೌಮೇನ್ ರನ್ನು ತೀವ್ರವಾಗಿ ಥಳಿಸಿದ್ದು, ಅವರು ಕುಸಿದು ಬಿದ್ದಿದ್ದಾರೆ. ಇದನ್ನು ಗಮನಿಸಿದ ಸುತ್ತಮುತ್ತಲಿನ ಜನತೆ ಧಾವಿಸಿ ಬರುತ್ತಿದ್ದಂತೆಯೇ ಟ್ರಾಫಿಕ್ ಸ್ವಯಂ ಸೇವಕರು ಸ್ಥಳದಿಂದ ಪರಾರಿಯಾಗಿದ್ದಾರೆ. ಸೌಮೇನ್ ರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಸಾವಿನ ಸುದ್ದಿ ಹಬ್ಬುತ್ತಿದ್ದಂತೆಯೇ ಆಕ್ರೋಶಗೊಂಡ ಜನತೆ ರಸ್ತೆ ತಡೆ ನಡೆಸಿದ್ದು, ತಪ್ಪಿತಸ್ಥರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸುಮನ್ ರಾಯ್ ಎಂಬಾತನನ್ನು ಬಂಧಿಸಿದ್ದು, ಸೆಕ್ಯುರಿಟಿ ಕ್ಯಾಮರಾ ಪರಿಶೀಲಿಸಿ ಇತರೆ ಆರೋಪಿಗಳನ್ನೂ ಬಂಧಿಸುವುದಾಗಿ ತಿಳಿಸಿದ್ದಾರೆ. ಮೃತ ಸೌಮೇನ್ ದೇಬನಾಥ್ ವೃದ್ದ ತಂದೆ- ತಾಯಿ, ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದು, ಇವರ ದುಡಿಮೆಯನ್ನೇ ನೆಚ್ಚಿಕೊಂಡಿದ್ದ ಕುಟುಂಬ ಈಗ ಅನಾಥವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...