alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಕೈಪ್ ನಲ್ಲೇ ಮದುವೆ, ICU ನಲ್ಲೇ ಶಾಸ್ತ್ರ…!

ಕೋಲ್ಕತ್ತಾ : ತಾಯಿಯ ಕೊನೆಯ ಆಸೆ ಈಡೇರಿಸುವ ಉದ್ದೇಶದಿಂದ, ವ್ಯಕ್ತಿಯೊಬ್ಬರು ಅಮೆರಿಕದಲ್ಲಿದ್ದ ಯುವತಿಯೊಂದಿಗೆ ಸ್ಕೈಪ್ ನಲ್ಲೇ ಮದುವೆ ಮಾಡಿಕೊಂಡ ವಿಶೇಷ ಪ್ರಸಂಗವೊಂದು ಕೋಲ್ಕತ್ತಾದಲ್ಲಿ ನಡೆದಿದೆ.

ಅಮೆರಿಕದ ನೆವಾರ್ಕ್ ಜೆನೆಸಿಯೊ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಭಾಸ್ಕರ್ ರಾಯ್ ಬರ್ದನ್(33), ಸಂಶೋಧನಾ ವಿದ್ಯಾರ್ಥಿನಿ ಚಂದ್ರಿಮಾ ಚಟರ್ಜಿ ಅವರ ಮದುವೆ ಡಿಸೆಂಬರ್ 15 ರಂದು ನಿಗದಿಯಾಗಿತ್ತು. ಆದರೆ, ಭಾಸ್ಕರ್ ಅವರ ತಾಯಿ ಭಾಸ್ವತಿ(61) ಅವರನ್ನು ಅನಾರೋಗ್ಯದ ಕಾರಣ ಕೋಲ್ಕತ್ತಾದ ರೂಬಿ ಜನರಲ್ ಆಸ್ಪತ್ರೆಗೆ ಸೇರಿಸಲಾಗಿದೆ.

ಭಾಸ್ವತಿ ಅವರ ಆರೋಗ್ಯ ಗಂಭೀರ ಸ್ಥಿತಿಗೆ ತಲುಪಿದ ಕಾರಣ, ಅವರು ಡಿಸೆಂಬರ್ 15 ರವರೆಗೆ ಬದುಕುವುದು ಅನುಮಾನ ಎಂದು ವೈದ್ಯರು ತಿಳಿಸಿದ್ದಾರೆ. ತಾಯಿಯ ಕೊನೆಯ ಆಸೆಯಂತೆ ಆಸ್ಪತ್ರೆಯಲ್ಲೇ ಮದುವೆಯಾಗಲು ನಿಶ್ಚಯಿಸಿದ ಭಾಸ್ಕರ್, ವೈದ್ಯರ ನೆರವು ಕೇಳಿದ್ದಾರೆ. ಇದಕ್ಕೆ ವೈದ್ಯರು ಒಪ್ಪಿ ಬೇರೆ ರೋಗಿಗಳಿಗೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಿದ್ದಾರೆ.

ಆಸ್ಪತ್ರೆಯ ಕೊಠಡಿಯಲ್ಲಿ ಸ್ಕೈಪ್ ಮೂಲಕ ಅಮೆರಿಕದಲ್ಲಿದ್ದ ಚಂದ್ರಿಮಾ ಅವರೊಂದಿಗೆ ಭಾಸ್ಕರ್ ಬಂಗಾಳಿ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಮಲಗಿದಲ್ಲೇ ಮಗನ ಮದುವೆಯನ್ನು ಕಂಡ ತಾಯಿ ಭಾವುಕರಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...