alex Certify
ಕನ್ನಡ ದುನಿಯಾ       Mobile App
       

Kannada Duniya

ಸಿನಿಮಾ ಶೈಲಿಯಲ್ಲಿ ಪ್ರೀತಿ ವ್ಯಕ್ತಪಡಿಸಿದ್ದಾನೆ ಈ ಪ್ರೇಮಿ

ಪ್ರೀತಿ ಅನ್ನೋದೇ ಹಾಗೆ. ಲವ್ ವೈರಸ್ ಬಾಡಿಯಲ್ಲಿ ಸೇರಿಕೊಂಡು ಬಿಟ್ಟರೆ ಯಾರು ಏನು ಬೇಕಾದ್ರು ಮಾಡಬಹುದು ಅನ್ನೋದಕ್ಕೆ ಕೋಲ್ಕತ್ತಾದಲ್ಲಿ ನಡೆದಿರೋ ಈ ಘಟನೆಯೇ ಸಾಕ್ಷಿ.

ರೈಲಿನಲ್ಲಿ ಯುವತಿಯೊಬ್ಬಳ ಮೇಲೆ ಮೊದಲ ನೋಟದಲ್ಲೇ ಲವ್ ಆಯ್ತು ಅನ್ನೋ ಕಾರಣಕ್ಕೆ ಯುವಕನೊಬ್ಬ 4000 ಪೋಸ್ಟರ್ ಗಗಳನ್ನ ಆಕೆ ಓಡಾಡುವ ಜಾಗದಲ್ಲಿ ಅಂಟಿಸಿದ್ದಾನೆ. ಅಷ್ಟೇ ಅಲ್ಲ. ತನ್ನ ಬಗ್ಗೆ 7 ನಿಮಿಷಗಳ ವಿಡಿಯೋ ಒಂದನ್ನ ಮಾಡಿ ಯೂಟ್ಯೂಬ್ ನಲ್ಲಿ ಹರಿಬಿಟ್ಟಿದ್ದಾನೆ.

ಬಿಸ್ವಜಿತ್ ಪೊದಾರ್ ಎಂಬ ಕೋಲ್ಕತ್ತಾ ಮೂಲದ ಯುವಕ ಹೀಗೆ ಫಿಲ್ಮೀ ಸ್ಟೈಲ್ ನಲ್ಲಿ ಯುವತಿಯ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾನೆ. ಆಕೆಯನ್ನ ಆತ ಕೊನಾಗರ್ ನ ಲೋಕಲ್ ರೈಲಿನಲ್ಲಿ ತನ್ನ ಎದುರಿನ ಸೀಟ್ನಲ್ಲಿ ನೋಡಿದನಂತೆ. ಮೊದಲ ನೋಟದಲ್ಲೇ ಲವ್ ಆಯ್ತಂತೆ. ಆಕೆಯ ಚಿತ್ರವನ್ನು ನನ್ನ ಮನಸ್ಸಿನಿಂದ ತೆಗೆದು ಹಾಕೋಕೆ ಸಾಧ್ಯವೇ ಇಲ್ಲ ಅನ್ನೋ ಕಾರಣಕ್ಕೆ ಆತ ಆಕೆಯನ್ನ ಒಲಿಸಿಕೊಳ್ಳುವ ಪ್ರಯತ್ನ ಆರಂಭಿಸಿದ್ದಾನೆ. ಪೋಸ್ಟರ್ ಮತ್ತು ವಿಡಿಯೋ ಮಾತ್ರವಲ್ಲ. ಆಕೆಯನ್ನ ನೋಡಿದ ದಿನ ಧರಿಸಿದ್ದ ಟಿ- ಶರ್ಟ್ ನ್ನೇ ಆತ ತೆಗೆಯುತ್ತಲೇ ಇಲ್ಲ.

ನನ್ನ ಸ್ನೇಹಿತರು ಮತ್ತು ಕುಟುಂಬ ನನ್ನನ್ನು ಹುಚ್ಚ ಎನ್ನುತ್ತಿದ್ದಾರೆ. ಆದ್ರೆ ಅದಕ್ಕೆ ನಾನು ತಲೆಕೆಡಿಸಿಕೊಳ್ಳೋದಿಲ್ಲ. ಹಾಗಂತ ಬಲವಂತದಿಂದ ಆಕೆಯನ್ನ ಒಲಿಸಿಕೊಳ್ಳೋದಿಲ್ಲ. ಆಕೆ ನನ್ನ  ಬಗ್ಗೆ ತಿಳಿದುಕೊಂಡು ಅವಳಾಗಿಯೇ ಬರಬಹುದು ಅನ್ನೋ ನಂಬಿಕೆಯಲ್ಲಿ ಇಷ್ಟೆಲ್ಲಾ ಮಾಡ್ತಿದ್ದೀನಿ ಅಂತಾನೆ ಬಿಸ್ವಜಿತ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...