alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತ-ಬಾಂಗ್ಲಾ ಬಸ್ ಸೇವೆ ಶುರು

kolkata2

ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಭಾರತ ಪ್ರವಾಸದಲ್ಲಿದ್ದಾರೆ. ಈ ಸಂದರ್ಭದಲ್ಲಿ ಎರಡೂ ದೇಶಗಳು ಮತ್ತಷ್ಟು ಹತ್ತಿರವಾಗಿವೆ. ಎರಡು ದೇಶಗಳಿಗೆ ರಸ್ತೆ ಸಂಪರ್ಕ ಕಲ್ಪಿಸುವ ಬಸ್ ಸೇವೆ ಶುರುವಾಗಿದೆ. ಕೊಲ್ಕತ್ತಾ-ಖುಲ್ಲಾ-ಢಾಕಾ ಬಸ್ ಸಂಚಾರಕ್ಕೆ ಚಾಲನೆ ಸಿಕ್ಕಿದೆ. ಶೇಖ್ ಹಸೀನಾ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಂಟಿಯಾಗಿ ಬಸ್ ಸೇವೆಗೆ ಚಾಲನೆ ನೀಡಿದ್ದಾರೆ.

ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ಬಸ್ ಸಂಚಾರಕ್ಕೆ ಚಾಲನೆ ಸಿಕ್ಕಿದೆ. ಪಿಎಂ ಮೋದಿ ಹಾಗೂ ಶೇಖ್ ಹಸೀನಾ ವಿಡಿಯೋ ಕಾನ್ಪರೆನ್ಸ್ ಮೂಲಕ ಜಂಟಿಯಾಗಿ ಉದ್ಘಾಟನೆ ಮಾಡಿದ್ದಾರೆ. ಈ ಬಸ್ ಸೇವೆಯಿಂದಾಗಿ ಭಾರತ-ಬಾಂಗ್ಲಾ ಪ್ರಯಾಣಿಕರ ಪ್ರಯಾಣ ಸುಲಭವಾಗಲಿದೆ.

ಈ ಹಿಂದೆ ಕೋಲ್ಕತ್ತಾ-ಢಾಕಾ-ಅಗರ್ತಲಾ ಬಸ್ ಸೇವೆಯನ್ನು ಶುರುಮಾಡಲಾಗಿತ್ತು. ಈ ಸೇವೆಯಿಂದಾಗಿ ಕೋಲ್ಕತ್ತಾ ಅಗರ್ತಲಾ ನಡುವಿನ ದೂರ 1 ಸಾವಿರ ಕಿಲೋಮೀಟರ್ ಕಡಿಮೆಯಾಗಿದೆ. ಮೊದಲು ರಸ್ತೆ ಮಾರ್ಗವಾಗಿ ಕೋಲ್ಕತ್ತಾದಿಂದ ಅಗರ್ತಲಾಕ್ಕೆ 1650 ಕಿಲೋಮೀಟರ್ ದೂರ ಸಂಚರಿಸಬೇಕಿತ್ತು. ಆದ್ರೆ ಬಾಂಗ್ಲಾ ಪ್ರವೇಶದಿಂದಾಗಿ 1 ಸಾವಿರ  ಕಿಲೋಮೀಟರ್ ಕಡಿಮೆಯಾಗಿದ್ದು, 650 ಕಿಲೋಮೀಟರ್ ಸಂಚರಿಸಿದ್ರೆ ಸಾಕು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...