alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್ ! ಆಹಾರ ಮಳಿಗೆ ನೌಕರನನ್ನು ಕರ್ರಿಯಲ್ಲಿ ಮುಳುಗಿಸಿ ಸಾಯಿಸಿದ ಗ್ರಾಹಕ

eateryಹೋಟೆಲ್ ಗಳಿಗೆ ತೆರಳಿ ದುಬಾರಿ ದರ ತೆತ್ತು ತಿನ್ನುವ ಬದಲು ಕಣ್ಣ ಮುಂದೆಯೇ ತಯಾರಿಸಿ ಬಿಸಿ ಬಿಸಿಯಾಗಿ ಆಹಾರ ನೀಡುವ ಬೀದಿ ಬದಿ ವ್ಯಾಪಾರಿಗಳನ್ನೇ ಬಡ- ಮಧ್ಯಮ ವರ್ಗದ ಜನತೆ ಆಶ್ರಯಿಸಿದ್ದಾರೆ. ದರವೂ ಕಡಿಮೆ, ಹೊಟ್ಟೆ ತುಂಬಾ ಊಟವೂ ಸಿಗುತ್ತದೆ ಎಂಬುದೇ ಇದಕ್ಕೆ ಕಾರಣ.

ಆದರೆ ಹೀಗೆ ಊಟಕ್ಕೆ ಹೋದ ಗ್ರಾಹಕನೊಬ್ಬ ತನಗೆ ಬಡಿಸಿದ ಫಿಶ್ ಕರ್ರಿ ಸರಿಯಾಗಿರಲಿಲ್ಲವೆಂಬ ಕಾರಣಕ್ಕಾಗಿ ಬೀದಿ ಬದಿಯ ಆಹಾರ ವ್ಯಾಪಾರಿಯ ನೌಕರನನ್ನು ಕುದಿಯುತ್ತಿದ್ದ ಕರ್ರಿಗೆ ತಳ್ಳಿ ಸಾವಿಗೆ ಕಾರಣವಾದ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.

ಕೋಲ್ಕತ್ತಾದ ಲಾಲ್ ಬಜಾರ್ ನಲ್ಲಿರುವ ಬೀದಿ ಬದಿಯ ಆಹಾರ ಮಳಿಗೆಯೊಂದರಲ್ಲಿ ಬಿಹಾರ ಮೂಲದ 42 ವರ್ಷದ ಲಲನ್ ಸಿಂಗ್ ಎಂಬಾತ ಕೆಲಸ ಮಾಡುತ್ತಿದ್ದ. ಭಾನುವಾರದಂದು ಇಲ್ಲಿಗೆ ಭೇಟಿ ನೀಡಿದ್ದ ಮಹ್ಮದ್ ಝಕೀರ್ ಎಂಬಾತ ಫಿಶ್ ಕರ್ರಿಗೆ ಆರ್ಡರ್ ಮಾಡಿದ್ದ. ತನಗೆ ತಂದು ಕೊಟ್ಟಿದ್ದ ಫಿಶ್ ಕರ್ರಿ ಸರಿಯಿಲ್ಲವೆಂದು ಲಲನ್ ಸಿಂಗ್ ಜೊತೆ ಆತ ಕ್ಯಾತೆ ತೆಗೆದಿದ್ದ.

ಬಳಿಕ ಮಹ್ಮದ್ ಝಕೀರ್ ರೋಟಿ ತರಲು ಹೇಳಿದ್ದು, ಆತನ ಮಾತಿನಿಂದ ಕೋಪಗೊಂಡಿದ್ದ ಲಲನ್ ಸಿಂಗ್, ರೋಟಿ ಸಿದ್ದಪಡಿಸಲು ತಡವಾಗುತ್ತದೆ ಎಂದು ಹೇಳಿದ್ದಾನೆ. ಅಷ್ಟಕ್ಕೇ ಉದ್ರಿಕ್ತನಾದ ಮಹ್ಮದ್ ಝಕೀರ್ ಒಲೆಯ ಮೇಲೆ ಕುದಿಯುತ್ತಿದ್ದ ಕರ್ರಿಯ ಮೇಲೆ ಲಲನ್ ಸಿಂಗ್ ನನ್ನು ಮುಳುಗಿಸಿದ್ದಾನೆ. ಇದರಿಂದಾಗಿ ಮುಖ ಹಾಗೂ ಎದೆಗೆ ತೀವ್ರ ಸುಟ್ಟ ಗಾಯಗಳಾದ ಲಲನ್ ಸಿಂಗ್ ನನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಆತ ಗುರುವಾರದಂದು ಮೃತಪಟ್ಟಿದ್ದಾನೆ. ಭಾನುವಾರದ ಘಟನೆ ಬಳಿಕ ಮಹ್ಮದ್ ಝಕೀರ್ ನನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದ ಪೊಲೀಸರು ಗುರುವಾರ ಲಲನ್ ಸಿಂಗ್ ಮೃತಪಟ್ಟ ಮೇಲೆ ಕೊಲೆ ಆರೋಪದ ಮೇಲೆ ಮತ್ತೇ ಆತನನ್ನು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...