alex Certify
ಕನ್ನಡ ದುನಿಯಾ       Mobile App
       

Kannada Duniya

ಪಿತ್ತಕೋಶದಲ್ಲಿ ಸಿಕ್ತು 10,356 ಕಲ್ಲು…!

ಕೊಲ್ಕತ್ತಾದ ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆ ವೈದ್ಯರು ಆಹಾರ ತಜ್ಞರೊಬ್ಬರ ಪಿತ್ತಕೋಶದಲ್ಲಿದ್ದ 10,000 ಕಲ್ಲುಗಳನ್ನು ತೆಗೆದಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಕೆಲ ದಿನ ವಿಶ್ರಾಂತಿ ಬೇಕೆಂದು ವೈದ್ಯರು ಹೇಳಿದ್ದಾರೆ.

ಆಹಾರ ತಜ್ಞರಾಗಿರುವ ಡಾ. ರಾಜೀವ್ ಚೌಧರಿ ಅನೇಕ ದಿನಗಳಿಂದ ಕಿಬ್ಬೊಟ್ಟೆ ನೋವಿನಿಂದ ಬಳಲುತ್ತಿದ್ದರಂತೆ. ಮೆಡಿಕಲ್ ಕಾಲೇಜಿನಲ್ಲಿ ಈ ಸಂಬಂಧ ಚಿಕಿತ್ಸೆ ಪಡೆಯುತ್ತಿದ್ದರಂತೆ. ಯುಎಸ್ಜಿ ಮಾಡಿಸಿದಾಗ ಪಿತ್ತಕೋಶದಲ್ಲಿ ಕಲ್ಲಿರುವುದು ಪತ್ತೆಯಾಗಿದೆ. ಸೋಮವಾರ ಆಸ್ಪತ್ರೆಗೆ ದಾಖಲಾದ ಚೌಧರಿಗೆ ಬುಧವಾರ ಮೈಕ್ರೋ ಸರ್ಜರಿ ನಡೆದಿದೆ. ಈ ವೇಳೆ 10,000 ಕ್ಕೂ ಹೆಚ್ಚು ಕಲ್ಲು ಸಿಕ್ಕಿದೆ.

ಚಿಕಿತ್ಸೆ ನಡೆಸಿದ ವೈದ್ಯರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ 10,356 ಕಲ್ಲನ್ನು ತೆಗೆಯಲಾಗಿದೆ. ಕೊಲ್ಕತ್ತಾದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಪಿತ್ತಕೋಶದಲ್ಲಿ ಕಲ್ಲು ಸಿಕ್ಕಿದ್ದು ಎರಡನೇ ಘಟನೆಯಂತೆ. ಈ ಹಿಂದೆ 12 ಸಾವಿರ ಕಲ್ಲನ್ನು ವ್ಯಕ್ತಿಯೊಬ್ಬರ ಪಿತ್ತಕೋಶದಿಂದ ತೆಗೆಯಲಾಗಿತ್ತಂತೆ.

ಕೊಲೆಸ್ಟ್ರಾಲ್ ಹೆಚ್ಚಿತ್ತು. ಹಾಗಾಗಿ ಕಲ್ಲಿನ ಗಾತ್ರ ದೊಡ್ಡದಾಗ್ತಾ ಹೋಗಿದೆ. ಒತ್ತಡ ಹಾಗೂ ಜಂಕ್ ಫುಡ್ ಸೇವನೆ ಕೂಡ ಇದಕ್ಕೆ ಕಾರಣವಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಚೌಧರಿಗೆ 40 ನಿಮಿಷಗಳ ಕಾಲ ಶಸ್ತ್ರಚಿಕಿತ್ಸೆ ನಡೆದಿದೆ. ಚೌಧರಿ ಕೊಲ್ಕತಾದ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ನಲ್ಲಿ ಕೆಲಸ ಮಾಡ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...