alex Certify
ಕನ್ನಡ ದುನಿಯಾ       Mobile App
       

Kannada Duniya

ಅವಳಿ ಹೆಣ್ಣು ಮಕ್ಕಳನ್ನು 1.8 ಲಕ್ಷಕ್ಕೆ ಮಾರಾಟ ಮಾಡಿದ್ದ ಬಟ್ಟೆ ವ್ಯಾಪಾರಿ ಅರೆಸ್ಟ್

ಕೊಂಚವೂ ಕನಿಕರವೇ ಇಲ್ಲದ ತಂದೆಯೊಬ್ಬ ತನ್ನ ಒಂದು ತಿಂಗಳ ಅವಳಿ ಹೆಣ್ಣು ಮಕ್ಕಳನ್ನು ಮಾರಾಟ ಮಾಡಿ ಸಿಕ್ಕಿಬಿದ್ದಿದ್ದಾನೆ.

ಈ ಘಟನೆ ನಡೆದಿರುವುದು ಕೋಲ್ಕೊತ್ತಾದಲ್ಲಿ. ಬಟ್ಟೆ ವ್ಯಾಪಾರಿಯಾದ ರತನ್ ಬ್ರಹ್ಮ ತನ್ನ ಒಂದು ಮಗುವನ್ನು ಅಕ್ಕಿ ವ್ಯಾಪಾರಿಯೊಬ್ಬರಿಗೆ 1 ಲಕ್ಷ ರೂಪಾಯಿಗೆ ಹಾಗೂ ಇನ್ನೊಂದು ಮಗುವನ್ನು ಮಕ್ಕಳಿರದ ದಂಪತಿಗೆ 80 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದ.

ಆತನಿಗೆ ಈಗಾಗಲೇ ಮಗಳಿದ್ದು, ಮತ್ತೆರಡು ಮಕ್ಕಳನ್ನು ಪೊರೆಯಲು ಸಾಧ್ಯವಿಲ್ಲವೆಂದು ಮಾರಾಟ ಮಾಡಿದೆ ಎಂದು ಪೊಲೀಸ್ ವಿಚಾರಣೆ ವೇಳೆ ರತನ್ ಒಪ್ಪಿಕೊಂಡಿದ್ದಾನೆ.

ಠಾಕೂರ್ ನಗರದ ಅಕ್ಕಿ ವ್ಯಾಪಾರಿಯ ಮನೆಯಲ್ಲಿದ್ದ ಒಂದು ಮಗುವನ್ನು ಹಾಗೂ ರಾಮಚಂದ್ರಾಪುರದಲ್ಲಿದ್ದ ಇನ್ನೊಂದು ಮಗುವನ್ನು ರಕ್ಷಿಸಲಾಗಿದೆ. ಅವುಗಳನ್ನು ಚಂದ್ರಾಪುರ ಆರೋಗ್ಯ ಕೇಂದ್ರದಲ್ಲಿ ಇರಿಸಲಾಗಿದ್ದು, ಬಳಿಕ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಮಕ್ಕಳ ರಕ್ಷಣೆ ಮತ್ತು ಆರೈಕೆ ಕಾಯ್ದೆಯಂತೆ ಅವರ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಮಕ್ಕಳನ್ನು ಖರೀದಿಸಿದವರನ್ನೂ ವಿಚಾರಣೆಗೊಳಪಡಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...