alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್ ! ಕಿರುತೆರೆ ನಟಿಗೆ ಲೈಂಗಿಕ ಕಿರುಕುಳ

ಕಿರುತೆರೆ ಕಲಾವಿದೆಗೆ ಟ್ಯಾಕ್ಸಿ ಚಾಲಕನೊಬ್ಬ ಲೈಂಗಿಕ ಕಿರುಕುಳ ನೀಡಿದ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.

24 ವರ್ಷದ ಈ ನಟಿ ಕೋಲ್ಕತ್ತಾದ ಹೌರಾ ಸ್ಟೇಷನ್ ಬಳಿಯ ಸಬ್ ವೇನಲ್ಲಿ ಕ್ಯಾಬ್ ಚಾಲಕನಿಂದ ಲೈಂಗಿಕ ಹಿಂಸೆಗೊಳಗಾಗಿದ್ದಾಳೆ.

ಭಾನುವಾರ ರಾತ್ರಿ 10.20 ರ ಸುಮಾರಿಗೆ ಈಕೆ ನಗರಕ್ಕೆ ವಾಪಸ್ಸಾಗುತ್ತಿದ್ದಳು. ಕ್ಯಾಬ್ ಚಾಲಕ ಪಪ್ಪು ಸೋನ್ಕರ್ ಎಂಬಾತ ಆಕೆಗೆ ಕ್ಯಾಬ್ ಹತ್ತುವಂತೆ ಹೇಳಿದ್ದಾನೆ. ಈ ವೇಳೆ ಕ್ಯಾಬ್ ಹತ್ತುವುದು ಅಥವಾ ಬಿಡುವುದು ನನ್ನಿಷ್ಟ ಎಂದಿದ್ದಾಳೆ ನಟಿ. ಇಷ್ಟಕ್ಕೇ ಆತ ತನ್ನನ್ನು ಮುಟ್ಟಲು ಬಂದಿದ್ದು, ತಾನು ಪ್ರತಿಭಟಿಸಿದ್ದಾಗಿ ತಿಳಿಸಿದ್ದಾಳೆ.

ಅಲ್ಲದೇ, ಆತ ನನ್ನ ಮೇಲೆ ಬೀಳಲು ಯತ್ನಿಸಿದ. ಆ ಸ್ಥಳದಲ್ಲಿ ಸಾಕಷ್ಟು ಜನರಿದ್ದರೂ ಯಾರೂ ಕೂಡ ತನ್ನ ಸಹಾಯಕ್ಕೆ ಬರಲಿಲ್ಲ ಎಂದು ಹೇಳಿದ್ದಾಳೆ. ಆಗ ಅಲ್ಲಿಗೆ ಬಂದ ರೈಲ್ವೇ ರಕ್ಷಣಾ ದಳದವರು ಹಾಗೂ ಪೊಲೀಸರು ತನ್ನನ್ನು ರಕ್ಷಿಸಿದ್ದಾಗಿ ನಟಿ ತಿಳಿಸಿದ್ದು, ಸದ್ಯ ನಟಿಯ ದೂರಿನ ಮೇರೆಗೆ ಚಾಲಕ ಪಪ್ಪುವನ್ನು ಪೊಲೀಸರು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...