alex Certify
ಕನ್ನಡ ದುನಿಯಾ       Mobile App
       

Kannada Duniya

ನಜ್ಜುಗುಜ್ಜಾಗಿ ಹೋಗಿದೆ ಮೂರು ಕೋಟಿ ರೂಪಾಯಿ ಬೆಲೆಯ ಫೆರಾರಿ ಕಾರು

ಕೋಲ್ಕತ್ತಾದಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ಉದ್ಯಮಿಯೊಬ್ಬರು ಸಾವನ್ನಪ್ಪಿದ್ದಾರೆ. ಭಾನುವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಉದ್ಯಮಿ 43 ವರ್ಷದ ಶಿಬಜಿ ರಾಯ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಕಾರುಗಳ ಕ್ರೇಜ್ ಹೊಂದಿದ್ದ ಶಿಬಜಿ ರಾಯ್ ಫೆರಾರಿ ಕಾರು ಖರೀದಿಸುವ ಇಚ್ಛೆ ಹೊಂದಿದ್ದು, ಹೀಗಾಗಿ ತಮ್ಮ ಸ್ನೇಹಿತನ 3.13 ಕೋಟಿ ರೂ. ಮೌಲ್ಯದ ಫೆರಾರಿ ಕಾರನ್ನು ಟೆಸ್ಟ್ ಡ್ರೈವ್ ಗಾಗಿ ತೆಗೆದುಕೊಂಡು ಹೋಗಿದ್ದರೆನ್ನಲಾಗಿದೆ.

120 ಕಿ.ಮೀ. ವೇಗದಲ್ಲಿ ಇವರು ಬರುತ್ತಿದ್ದಾಗ ಹೌರಾದ ದೋಮಜೂರು ಬಳಿ ಅವರಿದ್ದ ಕಾರು ಅಪಘಾತಕ್ಕೀಡಾಗಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಒಳಗೆ ಸಿಲುಕಿಕೊಂಡಿದ್ದ ಶಿಬಜಿ ರಾಯ್ ರನ್ನು ಕಷ್ಟಪಟ್ಟು ಹೊರತೆಗೆಯಲಾಯಿತಾದರೂ ಕೇವಲ ಅರ್ಧ ಗಂಟೆಯಲ್ಲಿ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಮತ್ತಿಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...